ಪೆಟ್ರೋಕೆಮ್ ಎಂಜಿನಿಯರಿಂಗ್: ಜಾಣರ ಆಯ್ಕೆ

7
ಕೆಬಿಎನ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾತ್ರ ಕೋರ್ಸ್‌ ಲಭ್ಯ

ಪೆಟ್ರೋಕೆಮ್ ಎಂಜಿನಿಯರಿಂಗ್: ಜಾಣರ ಆಯ್ಕೆ

Published:
Updated:
ಪೆಟ್ರೋಕೆಮ್ ಎಂಜಿನಿಯರಿಂಗ್: ಜಾಣರ ಆಯ್ಕೆ

ಕಲಬುರ್ಗಿ: ತಾಂತ್ರಿಕ ಜ್ಞಾನ ಮತ್ತು ಕೌಶಲ, ಜಗತ್ತು ಸುತ್ತುವ ಆಸಕ್ತಿ ಹೊಂದಿರುವವರು ಪೆಟ್ರೋಕೆಮಿಕಲ್ ಅಥವಾ ಪೆಟ್ರೋಕೆಮ್ ಎಂಜಿನಿಯರಿಂಗ್ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ನಗರದ ಖಾಜಾ ಬಂದಾ ನವಾಜ್ (ಕೆಬಿಎನ್) ಕಾಲೇಜಿನಲ್ಲಿ 2011ರಲ್ಲಿ ಈ ಕೋರ್ಸ್‌ ಅನ್ನು ಪ್ರಾರಂಭಿಸಲಾಗಿದೆ. ತೈಲ ಮತ್ತು ನೈಸರ್ಗಿಕ ಅನಿಲ (ಒಎನ್‌ಜಿಸಿ) ಕ್ಷೇತ್ರದಲ್ಲಿ ಹೇರಳ ಉದ್ಯೋಗಾವಕಾಶ ಲಭ್ಯವಿರುವ ಕಾರಣ ಈ ಕೊರ್ಸ್‌ಗೆ ಬೇಡಿಕೆ ಅಧಿಕವಾಗಿದೆ.

ಸೀಟು ಪಡೆಯವುದು ಸುಲಭ: ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯಲ್ಲಿ ಭೌತವಿಜ್ಞಾನ, ರಸಾಯನ ವಿಜ್ಞಾನ ಮತ್ತು ಗಣಿತಶಾಸ್ತ್ರ ವಿಷಯಗಳನ್ನು ಕಡ್ಡಾಯವಾಗಿ ಓದಿರಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ 45 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶೇ 40ರಷ್ಟು ಅಂಕಗಳನ್ನು ಪಡೆದಿರುಬೇಕು. ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಅರ್ಹತೆ ಹೊಂದಿರಬೇಕು.

ಏನೆಂದು ಕೆಲಸ ಮಾಡಬಹುದು?: ಪೆಟ್ರೋಕೆಮ್ ಎಂಜಿನಿಯರ್, ಸಂಸ್ಕರಣ ಎಂಜಿನಿಯರ್, ಡ್ರಿಲ್ಲಿಂಗ್ ಎಂಜಿನಿಯರ್, ಪ್ರೊಡಕ್ಷನ್ ಎಂಜಿನಿಯರ್, ರಿಸರ್ವೈರ್ ಎಂಜಿನಿಯರ್ ಮತ್ತು ಸೇಫ್ಟಿ ಎಂಜಿನಿಯರ್ ಕೆಲಸ ಮಾಡಬಹುದಾಗಿದೆ. ಮೆಕ್ಯಾನಿಕಲ್ ಮತ್ತು ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಅಧ್ಯಯನ ಮಾಡಿದವರಿಗೂ ಈ ಕ್ಷೇತ್ರದಲ್ಲಿ ಅವಕಾಶಗಳಿವೆ.

‘ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್‌ಗಳನ್ನು ಶಕ್ತಿ ಇಂಧನಗಳು ಎಂದು ಕರೆಯಲಾಗುತ್ತದೆ. ಜಗತ್ತು ಚಲನೆಯಲ್ಲಿರಲು ಪೆಟ್ರೋಲಿಯಂ ಉತ್ಪನ್ನಗಳು ಬೇಕೇಬೇಕು. ಹೀಗಾಗಿ ಜಾಗತಿಕವಾಗಿ ಈ ಕ್ಷೇತ್ರದಲ್ಲಿ ಬಹಳಷ್ಟು ಉದ್ಯೋಗಗಳು ಲಭ್ಯ ಇವೆ. ನಮ್ಮ ದೇಶಕ್ಕಿಂತಲೂ ವಿದೇಶ ಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಫೈರ್ ಅಂಡ್ ಸೇಫ್ಟಿ ಬಗ್ಗೆಯೂ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಕೋರ್ಸ್‌ ಮುಗಿಸಿದ ತಕ್ಷಣ ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಬಹುದಾಗಿದೆ’ ಎಂದು ವಿಭಾಗದ ಸಹಾಯಕ ಪ್ರಾಧ್ಯಾಪಕ ವಿಕಾಸ ಅಣಕಲ್ ಹೇಳುತ್ತಾರೆ.

‘ನೈಸರ್ಗಿಕ ತೈಲ ಉತ್ಪನ್ನಗಳ ಜತೆಗೆ ಪರಿಸರ ಸ್ನೇಹಿ, ಜೈವಿಕ ಡೀಸೆಲ್‌ಗಳನ್ನು ಉತ್ಪಾದನೆ ಇಂದು ಪ್ರಮುಖವಾಗಿದೆ. ಈಗಾಗಲೇ ಹೊಂಗೆ ಬೀಜಗಳ ವಿತರಣೆ, ಜೈವಿಕ ತಂತ್ರಜ್ಞಾನದ ಮೂಲಕ ಡೀಸೆಲ್ ಉತ್ಪಾದನೆ ಮಾಡಲಾಗುತ್ತಿದೆ. ಸಾಕಷ್ಟು ಬೇಡಿಕೆ ಇದೆ’ ಎಂದು ಹೇಳಿದರು.

ಎಲ್ಲೆಲ್ಲಿ ಉದ್ಯೋಗಾವಕಾಶ?

ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ, ಬಿಪಿಸಿಎಲ್, ಜಿಎಐಎಲ್ (ಗೇಲ್), ಹಿಂದೂಸ್ತಾನ್‌ ಪೆಟ್ರೋಲಿಯಂ, ಖಾಸಗಿ ಕಂಪನಿಗಳಾದ ರಿಲಯನ್ಸ್ ಪೆಟ್ರೋಲಿಯಂ, ಶೆಲ್ ಪೆಟ್ರೋಕೆಮಿಕಲ್ಸ್‌, ಎಂಆರ್‌ಪಿಎಲ್, ಎಂಸಿಎಫ್‌, ಬಿಎಎಸ್‌ಎಫ್‌ ಸೇರಿದಂತೆ ಉದ್ಯೋಗಾವಕಾಶಗಳು ಲಭ್ಯ ಇವೆ.

ಪ್ರಾಣಿ ಕೊಬ್ಬಿನಿಂದ ಡೀಸೆಲ್ ತಯಾರಿಕೆ!

ಪೆಟ್ರೋಕೆಮ್ ವಿದ್ಯಾರ್ಥಿಗಳು ಪ್ರಾಣಿಗಳ ಕೊಬ್ಬಿನಿಂದ ಡೀಸೆಲ್ ತಯಾರಿಸಿ ಗಮನ ಸೆಳೆದಿದ್ದಾರೆ. ಇದು ನೈಸರ್ಗಿಕವಾಗಿ ದೊರಕುವ ಡೀಸೆಲ್‌ಗೆ ಸಮವಾಗಿದೆ. ವಾಹನಗಳಲ್ಲಿ ಇದನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಪರೀಕ್ಷೆ ಕೈಗೊಳ್ಳಲು ಹೈದರಾಬಾದ್‌ನ ಕಂಪನಿಯೊಂದಕ್ಕೆ ಮಾದರಿಯನ್ನು ಕಳುಹಿಸಲಾಗಿದೆ. ಇದಲ್ಲದೇ ಬಳಕೆ ಮಾಡಿದ ಪ್ಲಾಸ್ಟಿಕ್‌ನಿಂದ ಕೂಡ ಈ ಕಾಲೇಜಿನ ವಿದ್ಯಾರ್ಥಿಗಳು ಡೀಸೆಲ್ ತಯಾರಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry