ಶುಕ್ರವಾರ, ಏಪ್ರಿಲ್ 3, 2020
19 °C

ಸಸ್ಯಾಹಾರಕ್ಕೆ ‘ಸ್ವಯಂ ಪಾಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಸ್ಯಾಹಾರಕ್ಕೆ ‘ಸ್ವಯಂ ಪಾಕ’

‘ಸ್ವಯಂಪಾಕ’ ಬ್ಲಾಗ್‌ನಲ್ಲಿ ಕರ್ನಾಟಕದ ಬಹುತೇಕ ಸಸ್ಯಾಹಾರ ಅಡುಗೆಗಳ ಸವಿವರ ಮಾಹಿತಿಯಿದೆ. ಈ ಬ್ಲಾಗ್‌ ಆರಂಭಿಸಿದವರು ರಾಜಿ ಚಂದ್ರಶೇಖರ್‌. 

ಇಂದು ಆಧುನಿಕತೆಯ ಜೀವನ ಶೈಲಿ ಅಡುಗೆ ಮನೆಯನ್ನೆ ಬದಲಾಯಿಸಿದೆ. ಸಂಸ್ಕರಿಸಿದ ಆಹಾರ, ಧಿಡೀರ್ ಖಾದ್ಯಗಳ ಆರ್ಭಟದಲ್ಲಿ ಹಿಂದಿನ ಕಾಲದ ಮನೆ ಅಡುಗೆಗಳು ಮಾಸುತ್ತಾ ಬರುತ್ತಿದೆ. ಆರೋಗ್ಯಕರವಾದ ರೆಸಿಪಿಯನ್ನೇ ಹಂಚಿಕೊಳ್ಳುವುದು ಈ ಬ್ಲಾಗ್‌ ಉದ್ದೇಶ ಎಂದು ರಾಜಿ ಚಂದ್ರಶೇಖರ್‌ ಬರೆದಿದ್ದಾರೆ.

ಚಿಕ್ಕಮಗಳೂರು ಹತ್ತಿರದ ಒಂದು ಸಣ್ಣ ಹಳ್ಳಿ ಕೂದುವಳ್ಳಿಯವರಾದ ರಾಜಿ, ಅಮೆರಿಕದಲ್ಲಿ ನೆಲೆಸಿದ್ದಾರೆ. ಸ್ವಯಂಪಾಕ ಬ್ಲಾಗ್‌ನಲ್ಲಿ ಮೈಸೂರು, ಬೆಂಗಳೂರು, ಮಲೆನಾಡು ಪ್ರದೇಶ, ಉತ್ತರ ಕರ್ನಾಟಕ, ಉಡುಪಿ, ಮಂಗಳೂರು ಅಡುಗೆಗಳ ರೆಸಿಪಿಗಳನ್ನು ಹಂಚಿಕೊಂಡಿದ್ದಾರೆ. ಬೆಳಗ್ಗಿನ ಉಪಹಾರ, ಮಧ್ಯಾಹ್ನ, ರಾತ್ರಿಯೂಟಕ್ಕೆ ಬೇರೆ ಬೇರೆ ರೆಸಿಪಿಗಳು ಇಲ್ಲಿವೆ. ಇದಲ್ಲದೇ ಈ ಬ್ಲಾಗ್‌ನಲ್ಲಿ ಆರೋಗ್ಯ ಸಂಬಂಧಿತ ಮಾಹಿತಿಗಳೂ ಇವೆ. ಆದರೆ ಎಲ್ಲಾ ಮಾಹಿತಿಗಳು ಆಂಗ್ಲ ಭಾಷೆಯಲ್ಲಿವೆ.

ಕೊಂಡಿ–http://swayampaaka.com/

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)