ವಿಚಾರಣೆಗೆ ಹಾಜರಾಗಲು ಮುಷರಫ್‌ಗೆ ಗಡುವು

7

ವಿಚಾರಣೆಗೆ ಹಾಜರಾಗಲು ಮುಷರಫ್‌ಗೆ ಗಡುವು

Published:
Updated:
ವಿಚಾರಣೆಗೆ ಹಾಜರಾಗಲು ಮುಷರಫ್‌ಗೆ ಗಡುವು

ಇಸ್ಲಾಮಾಬಾದ್: ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌, ಗುರುವಾರ ಮಧ್ಯಾಹ್ನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ಗೆ ಗಡುವು ನೀಡಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯ ನಾಯಮೂರ್ತಿ ಸಾಖೀಬ್‌ ನಿಸಾರ್‌ ನೇತೃತ್ವದ ತ್ರಿಸದಸ್ಯ ಪೀಠ, ಸೇನಾಧಿಕಾರಿಯಾಗಿದ್ದವರು ತನ್ನ ದೇಶಕ್ಕೆ ಹಿಂದಿರುಗಲು ಇಷ್ಟೊಂದು ಭಯಪಡುತ್ತಿರುವುದು ಏಕೆ ಎಂದು ಆಶ್ಚರ್ಯವ್ಯಕ್ತಪಡಿಸಿದೆ. ಗುರುವಾರ ಮಧ್ಯಾಹ್ನ ಎರಡು ಗಂಟೆಯೊಳಗೆ ವಿಚಾರಣೆಗೆ ಹಾಜರಾಗಬೇಕು, ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳುವುದಾಗಿ ಕೋರ್ಟ್‌ ಎಚ್ಚರಿಕೆ ನೀಡಿದೆ ಎಂದು ’ಡಾನ್‌’ ಪತ್ರಿಕೆ ವರದಿ ಮಾಡಿದೆ.

2013ರಲ್ಲಿ ಪೇಶಾವರ ಹೈಕೋರ್ಟ್‌ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮುಷರಫ್‌ ಅವರನ್ನು ಅನರ್ಹತೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್‌ನಲ್ಲಿ ಮೆಲ್ಮನವಿ ಸಲ್ಲಿಸಿದ್ದಾರೆ. ಜುಲೈ 25ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವುದಕ್ಕೆ ಮುಷರಫ್‌ ಅವರಿಗೆ ಕಳೆದ ವಾರ ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry