ಸಯೀದ್‌ ಸ್ಥಾಪಿಸಿರುವ ಪಕ್ಷದ ನೋಂದಣಿಗೆ ಆಯೋಗ ನಕಾರ

7

ಸಯೀದ್‌ ಸ್ಥಾಪಿಸಿರುವ ಪಕ್ಷದ ನೋಂದಣಿಗೆ ಆಯೋಗ ನಕಾರ

Published:
Updated:

ಇಸ್ಲಾಮಾಬಾದ್‌: ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ಸ್ಥಾಪಿಸಿರುವ ಮಿಲ್ಲಿ ಮುಸ್ಲಿಂ ಲೀಗ್‌ (ಎಂಎಂಎಲ್‌) ರಾಜಕೀಯ ಪಕ್ಷವನ್ನು ನೋಂದಣಿ ಮಾಡಿಕೊಳ್ಳಲು ಪಾಕಿಸ್ತಾನದ ಚುನಾವಣಾ ಆಯೋಗ ಎರಡನೇ ಬಾರಿಗೆ ನಿರಾಕರಿಸಿದೆ.

ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದವಾ ಉಗ್ರ ಸಂಘಟನೆಯನ್ನು ನಿಷೇಧಿಸಿದ ಬಳಿಕ, ಅವರು ಎಂಎಂಎಲ್‌ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಆದರೆ, ಅಮೆರಿಕ ಇದನ್ನು ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಿದೆ.

ಜುಲೈ 25ರಂದು ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಉದ್ದೇಶಿಸಿರುವ ಸಯೀದ್‌, ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಆದರೆ, ಪಕ್ಷದ ಹೆಸರನ್ನು ನೋಂದಾಯಿಸಿಕೊಳ್ಳಲು ಆಯೋಗ ನಿರಾಕರಿಸಿರುವುದರಿಂದ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry