ಎಂ.ಬಿ.ಪಾಟೀಲ ಜತೆ ಮನಸ್ತಾಪ ಇಲ್ಲ: ಸಚಿವ ಶಿವಾನಂದ ಪಾಟೀಲ್‌

7

ಎಂ.ಬಿ.ಪಾಟೀಲ ಜತೆ ಮನಸ್ತಾಪ ಇಲ್ಲ: ಸಚಿವ ಶಿವಾನಂದ ಪಾಟೀಲ್‌

Published:
Updated:

ವಿಜಯಪುರ: ‘ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಜತೆ ನಮ್ಮದೇನು ಜಗಳವಿಲ್ಲ. ಅವರಿಗಾಗಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ ಬಿಟ್ಟುಕೊಟ್ಟು, ಬಸವನಬಾಗೇವಾಡಿಗೆ ಬಂದವನು ನಾನು’ ಎಂದು ಆರೋಗ್ಯ ಸಚಿವ ಶಿವಾನಂದ ಎಸ್‌.ಪಾಟೀಲ ಹೇಳಿದರು.

‘ಎಂ.ಬಿ.ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ, ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಜಿಲ್ಲೆಯ ಸಂಪೂರ್ಣ ನೀರಾವರಿಗಾಗಿ, ಸ್ವಾರ್ಥ ಬದಿಗಿಟ್ಟು ಸಹಕಾರ ಕೊಟ್ಟಿದ್ದೇವೆ. ಆದರೂ ಹೋದ ಎಲ್ಲೆಡೆ ಪತ್ರಕರ್ತರಷ್ಟೇ ಈ ವಿಷಯವನ್ನು ಪದೇ ಪದೇ ಏಕೆ ಕೇಳುತ್ತಾರೆ ಎಂಬುದೇ ಗೊತ್ತಾಗ್ತಿಲ್ಲ’ ಎಂದು ಬುಧವಾರ ರಾತ್ರಿ ನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸಚಿವರು ಬೇಸರ ವ್ಯಕ್ತಪಡಿಸಿದರು.

‘ಅಧಿಕಾರ ಯಾರಿಗೂ ಶಾಶ್ವತವಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ, ಜಲ

ಸಂಪನ್ಮೂಲ ಸಚಿವರಾಗಿ ಎಂ.ಬಿ.ಪಾಟೀಲ ಜಿಲ್ಲೆಯಲ್ಲಿ ಈ ಹಿಂದಿನ ಅವಧಿಯಲ್ಲಿ ಕೈಗೊಂಡಿದ್ದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕ

ವಾಗಿ ಮುಂದುವರೆಸಿಕೊಂಡು ಹೋಗುವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry