ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಚಕ ಹೋರಾಟಗಳಿಗೆ ಈ ಕ್ರೀಡಾಂಗಣಗಳೇ ವೇದಿಕೆ

Last Updated 13 ಜೂನ್ 2018, 19:30 IST
ಅಕ್ಷರ ಗಾತ್ರ

ಈ ಬಾರಿಯ ವಿಶ್ವಕಪ್‌ನ 64 ಪಂದ್ಯಗಳು ಒಟ್ಟು 12 ಕ್ರೀಡಾಂಗಣಗಳಲ್ಲಿ ನಡೆಯಲಿವೆ. ರಷ್ಯಾದ ಪ್ರಮುಖ 11 ನಗರಗಳಲ್ಲಿನ ಈ ಕ್ರೀಡಾಂಗಣಗಳನ್ನು ಸಕಲ ರೀತಿಯಲ್ಲಿ ಸಿದ್ಧಗೊಳಿಸಲಾಗಿದೆ.

81 ಸಾವಿರಕ್ಕೂ ಹೆಚ್ಚು ಆಸನ ಸಾಮರ್ಥ್ಯ ಹೊಂದಿರುವ ಲುಜ್‌ನಿಕಿ, ಈ ಸಲದ ವಿಶ್ವಕಪ್‌ನ ದೊಡ್ಡ ಕ್ರೀಡಾಂಗಣ. ಈ ಟೂರ್ನಿಗಾಗಿಯೇ ಕ್ರೀಡಾಂಗಣವನ್ನು ನವೀಕರಣಗೊಳಿಸಲಾಗಿದೆ. ಒಂದು ತಿಂಗಳ ಕಾಲ ರೋಚಕ ಹೋರಾಟಗಳಿಗೆ ವೇದಿಕೆಯಾಗುವ ಈ ಕ್ರೀಡಾಂಗಣಗಳ ಮಾಹಿತಿ ಇಲ್ಲಿದೆ.

1) ಲುಜ್‌ನಿಕಿ ಕ್ರೀಡಾಂಗಣ

ಇದು ರಷ್ಯಾದ ರಾಜಧಾನಿ ಮಾಸ್ಕೊದಲ್ಲಿದೆ. ದೇಶದ ಪಶ್ಚಿಮ ಭಾಗದಲ್ಲಿರುವ ಮೊಸ್ಕ್ವಾ ನದಿಯ ತಟದಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ವಿಶ್ವಕಪ್‌ನ ಫೈನಲ್‌ ಪಂದ್ಚವು ಇಲ್ಲಿಯೇ ನಡೆಯಲಿದೆ.

ಆರಂಭಗೊಂಡ ವರ್ಷ: 1956

ಆಸನ ಸಾಮರ್ಥ್ಯ: 81,006

2) ಸ್ಪಾರ್ಟಕ್‌ ಕ್ರೀಡಾಂಗಣ

ಮಾಸ್ಕೊ ನಗರದ ವಾಯುವ್ಯ ಭಾಗದಲ್ಲಿದೆ. ರೋಮನ್‌ ಸಾಮ್ರಾಜ್ಯದ ಬಂಡಾಯಗಾರ ಸ್ಪಾರ್ಟಕಸ್‌ ಸ್ಮರಣಾರ್ಥ ಕ್ರೀಡಾಂಗಣಕ್ಕೆ ಸ್ಪಾರ್ಟಕ್‌ ಎಂದು ಹೆಸರಿಡಲಾಗಿದೆ. ಕ್ರೀಡಾಂಗಣ ಹೊರವಿನ್ಯಾಸದಲ್ಲಿ ವಜ್ರದ ಹರಳುಗಳನ್ನು ಬಳಸಿರುವುದು ವಿಶೇಷ.

ಆರಂಭಗೊಂಡ ವರ್ಷ: 2014

ಆಸನ ಸಾಮರ್ಥ್ಯ: 43,298

3) ಸೇಂಟ್‌ ಪೀಟರ್ಸ್‌ಬರ್ಗ್‌ ಕ್ರೀಡಾಂಗಣ

ರಾಷ್ಟ್ರದ ಉತ್ತರ ಭಾಗದಲ್ಲಿರುವ ಗಲ್ಫ್‌ ಆಫ್‌ ಫಿನ್‌ಲ್ಯಾಂಡ್‌ನಲ್ಲಿದೆ. ಸುಂದರವಾದ ನೇವಾ ನದಿಯ ದಡದಲ್ಲಿ ಇದನ್ನು ನಿರ್ಮಿಸಲಾಗಿದೆ. ವಿಶ್ವಕಪ್‌ನ ಒಂದು ಸೆಮಿಫೈನಲ್‌ ಪಂದ್ಯ ಇಲ್ಲಿಯೇ ನಡೆಯಲಿದೆ.

ಆರಂಭಗೊಂಡ ವರ್ಷ: 2017

ಆಸನ ಸಾಮರ್ಥ್ಯ: 68,134

4) ಫಿಶ್ತ್‌ ಕ್ರೀಡಾಂಗಣ

ದಕ್ಷಿಣ ಭಾಗದಲ್ಲಿರುವ ಸೋಚಿ ನಗರದಲ್ಲಿದೆ. ಕೌಕಾಸಸ್‌ ಪರ್ವತ ಶ್ರೇಣಿಗಳಿಂದ ಸುತ್ತುವರಿದಿರುವ ಬ್ಲ್ಯಾಕ್‌ ಸಮುದ್ರದ ದಡದಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ.

ಆರಂಭಗೊಂಡ ವರ್ಷ: 2013

ಆಸನ ಸಾಮರ್ಥ್ಯ: 47,700

5) ಕಜನ್‌ ಅರೆನಾ

ಮಾಸ್ಕೊದ ಪೂರ್ವದಲ್ಲಿರುವ ತತರ್‌ಸ್ತಾನ್‌ ಗಣರಾಜ್ಯದಲ್ಲಿದೆ. ವೋಲ್ಗಾ ಹಾಗೂ ಕಜಂಕಾ ನದಿಗಳು ಸಂಗಮವಾಗುವ ಸ್ಥಳದ ದಡದಲ್ಲಿ ಇದನ್ನು ನಿರ್ಮಿಸಲಾಗಿದೆ.

ಆಸನ ಸಾಮರ್ಥ್ಯ: 44,779

ಆರಂಭಗೊಂಡ ವರ್ಷ: 2013

6) ಸಮರಾ ಅರೆನಾ

ರಾಷ್ಟ್ರದ ಆಗ್ನೇಯ ದಿಕ್ಕಿನಲ್ಲಿದೆ. ವೋಲ್ಗಾ ನದಿಯ ಪೂರ್ವ ದಿಕ್ಕಿನಲ್ಲಿರುವ ದಡದ ಮೇಲೆ ಇದನ್ನು ನಿರ್ಮಿಸಲಾಗಿದೆ. ಇದು ಗುಮ್ಮಟಾಕಾರದಲ್ಲಿದೆ.

ಆಸನ ಸಾಮರ್ಥ್ಯ: 44,807

ಆರಂಭಗೊಂಡ ವರ್ಷ: 2018

7) ನಿಜ್ನಿ ನೊವ್‌ಗೊರೋದ್‌ ಕ್ರೀಡಾಂಗಣ

ಆಕರ್ಷಕ ಹೊರ ವಿನ್ಯಾಸದಿಂದ ಕೂಡಿರುವ ಇದು ಮಾಸ್ಕೊದ ಪೂರ್ವ ದಿಕ್ಕಿನಲ್ಲಿರುವ ನಿಜೆಗೊರೊದ್‌ ಒಬ್ಲ್ಯಾಸ್ಟ್‌ ನಗರದಲ್ಲಿದೆ. ವೋಲ್ಗಾ ಹಾಗೂ ಓಕಾ ನದಿಗಳು ಸಂಗಮವಾಗುವ ಸ್ಥಳದ ದಡದಲ್ಲಿ ಇದನ್ನು ನಿರ್ಮಿಸಲಾಗಿದೆ.

ಆಸನ ಸಾಮರ್ಥ್ಯ: 45,331

ಆರಂಭಗೊಂಡ ವರ್ಷ: 2018

8) ರೊಸ್ತೋವ್‌ ಅರೆನಾ

ಮಾಸ್ಕೊದ ದಕ್ಷಿಣ ಭಾಗದಲ್ಲಿದೆ. ಅಜೊವ್‌ ಸಮುದ್ರದಿಂದ 20 ಮೈಲು ದೂರದಲ್ಲಿದೆ. ಮನಮೋಹಕ ಡಾನ್‌ ನದಿಯ ದಡದಲ್ಲಿ ಇದನ್ನು ಸ್ಥಾಪಿಸಲಾಗಿದೆ.

ಆರಂಭಗೊಂಡ ವರ್ಷ: 2018

ಆಸನ ಸಾಮರ್ಥ್ಯ: 45,145

9) ವೋಲ್ಗಾಗ್ರ್ಯಾದ್‌ ಅರೆನಾ

ನೈಋತ್ಯ ದಿಕ್ಕಿನಲ್ಲಿರುವ ಪ್ರದೇಶದಲ್ಲಿದೆ. ಮುಂಚೆ ಈ ನಗರವನ್ನು ಸ್ಟಾಲಿನ್‌ಗ್ರ್ಯಾದ್‌ ಎಂದು ಕರೆಯಲಾಗುತ್ತಿತ್ತು. ವೋಲ್ಗಾ ನದಿಯ ಪಶ್ಚಿಮ ದಿಕ್ಕಿನಲ್ಲಿರುವ ದಡದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.

ಆರಂಭಗೊಂಡ ವರ್ಷ: 2018

ಆಸನ ಸಾಮರ್ಥ್ಯ: 45, 568

10) ಎಕಾತೆರಿನ್‌ಬರ್ಗ್‌ ಅರೆನಾ

ರಷ್ಯಾದ ನಾಲ್ಕನೇ ದೊಡ್ಡ ನಗರ ಎಕಾತೆರಿನ್‌ಬರ್ಗ್‌ನಲ್ಲಿದೆ. ಪೂರ್ವ ದಿಕ್ಕಿನಲ್ಲಿರುವ ಈ ನಗರವು ಉರಲ್‌ ಪರ್ವತಶ್ರೇಣಿಗಳಿಂದ ಆವೃತ್ತವಾಗಿದೆ. ಈ ಕ್ರೀಡಾಂಗಣವು ಸುಮಾರು 12 ಸಾವಿರ ತಾತ್ಕಾಲಿಕ ಆಸನಗಳನ್ನು ಹೊಂದಿದೆ.

ಆರಂಭಗೊಂಡ ವರ್ಷ: 1953

ಆಸನ ಸಾಮರ್ಥ್ಯ: 35,696

11) ಮೊರ್ದೊವಿಯಾ ಅರೆನಾ

ಮಾಸ್ಕೊದ ಆಗ್ನೇಯ ದಿಕ್ಕಿನಲ್ಲಿರುವ ಸರಾನ್ಸ್ಕ್‌ ನಗರದಲ್ಲಿದೆ. ಈ ನಗರವು ಮೊರ್ದೊವಿಯಾ ಗಣರಾಜ್ಯದ ರಾಜಧಾನಿ. ಸರಂಕಾ ಹಾಗೂ ಇನ್ಸಾರ್‌ ನದಿಗಳು ಸಂಗಮವಾಗುವ ಸ್ಥಳದ ದಡದಲ್ಲಿ ಇದನ್ನು ಸ್ಥಾಪಿಸಲಾಗಿದೆ.

ಆರಂಭಗೊಂಡ ವರ್ಷ: 2018

ಆಸನ ಸಾಮರ್ಥ್ಯ: 44,442

12) ಕಲಿನಿನ್‌ಗ್ರ್ಯಾದ್‌ ಕ್ರೀಡಾಂಗಣ

ಪೋಲೆಂಡ್‌ ಹಾಗೂ ಲಿಥುವೇನಿಯಾ ರಾಷ್ಟ್ರಗಳ ಗಡಿ ಭಾಗದಲ್ಲಿರುವ ಕಲಿನಿನ್‌ಗ್ರ್ಯಾದ್‌ ಒಬ್ಲ್ಯಾಸ್ಟ್‌ ನಗರದಲ್ಲಿದೆ. ಎರಡನೇ ಮಹಾಯುದ್ಧದವರೆಗೂ ಈ ನಗರವು ಜರ್ಮನಿ ದೇಶದ ಭಾಗವಾಗಿತ್ತು.

ಆರಂಭಗೊಂಡ ವರ್ಷ: 2018

ಆಸನ ಸಾಮರ್ಥ್ಯ: 35,212

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT