ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಇನ್ಫೆಂಟಿನೊ ಸ್ಪರ್ಧೆ

7

ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಇನ್ಫೆಂಟಿನೊ ಸ್ಪರ್ಧೆ

Published:
Updated:
ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಇನ್ಫೆಂಟಿನೊ ಸ್ಪರ್ಧೆ

ಮಾಸ್ಕೊ (ಎಎಫ್‌ಪಿ): ಫಿಫಾ ಅಧ್ಯಕ್ಷ ಜಿಯಾನಿ ಇನ್ಫೆಂಟಿನೊ ಅವರು ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಯಸಿದ್ದಾರೆ. ಅವರು ಬುಧವಾರ ಈ ವಿಷಯವನ್ನು ತಿಳಿಸಿದ್ದಾರೆ.

17 ವರ್ಷ ಅಧ್ಯಕ್ಷರಾಗಿದ್ದ ಸೆಪ್‌ ಬ್ಲಾಟರ್‌ ಅವರನ್ನು ಭ್ರಷ್ಟಾಚಾರ ಆರೋಪಗಳ ಕಾರಣ 2015ರಲ್ಲಿ ವಜಾ ಮಾಡಲಾಗಿತ್ತು. ಆರು ವರ್ಷಗಳ ಕಾಲ ಫಿಫಾ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಅವರ ಮೇಲೆ ನಿಷೇಧ ಹೇರಲಾಗಿದೆ.

2016ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಇನ್ಫೆಂಟಿನೊ ಬುಧವಾರ ಬೆಳಿಗ್ಗೆ ನಡೆದ ಫಿಫಾ ಕಾಂಗ್ರೆಸ್‌ನಲ್ಲಿ ಮಾತನಾಡಿ ‘ನಾನು ಅಧ್ಯಕ್ಷನಾಗಿ ಬರುವಾಗ ಫಿಫಾ ಸತ್ವ ಇಲ್ಲದ ಸಂಸ್ಥೆಯಾಗಿತ್ತು. ಈಗ ಅದು ಜೀವ ಕಳೆ ಪಡೆದುಕೊಂಡಿದೆ’ ಎಂದು ಹೇಳಿದ್ದರು.

ಸ್ಪೇನ್ ತಂಡಕ್ಕೆ ಹೊಸ ಕೋಚ್‌: ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಆರಂಭವಾಗಲು ಒಂದು ದಿನ ಬಾಕಿ ಇರುವಾಗ ಕೋಚ್‌ ಜೂಲನ್‌ ಲೊಪೆಟೆಗಿ ಅವರನ್ನು ಸ್ಪೇನ್ ತಂಡ ವಜಾ ಮಾಡಿದೆ. ಅವರ ಬದಲಿಗೆ ಫರ್ನಾಂಡೊ ಹೇರೊ ಅವರನ್ನು ನೇಮಕ ಮಾಡಲಾಗಿದೆ. ರಿಯ‌ಲ್ ಮ್ಯಾಡ್ರಿಡ್‌ ತಂಡದ ಕೋಚ್‌ ಆಗಿ ನೇಮಕಗೊಂಡ ಕೂಡಲೇ ಜೂಲನ್ ಅವರನ್ನು ತಂಡದ ಆಡಳಿತ ವಜಾ ಮಾಡಿತ್ತು.

50 ವರ್ಷದ ಹೇರೊ ಅವರಿಗೆ ದೊಡ್ಡ ತಂಡಗಳಿಗೆ ಕೋಚಿಂಗ್ ಮಾಡಿದ ಅನುಭವ ಇಲ್ಲ. ಅವರು ಈ ಹಿಂದೆ ಸ್ಪೇನ್‌ನ ಎರಡನೇ ಡಿವಿಷನ್‌ ಟೂರ್ನಿಯಲ್ಲಿ ಆಡಿದ ತಂಡ ಒವೊಡೊದ ತರಬೇತುದಾರ ಆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry