ಕೇಬಲ್ ಸಂಪರ್ಕಕ್ಕಾಗಿ ಕೈದಿಗಳಿಂದ ಉಪವಾಸ!

7

ಕೇಬಲ್ ಸಂಪರ್ಕಕ್ಕಾಗಿ ಕೈದಿಗಳಿಂದ ಉಪವಾಸ!

Published:
Updated:

ಬ್ಯೂನಸ್‌ ಐರಿಸ್‌ (ಎಎಫ್‌ಪಿ): ಕಡಿತ ಗೊಂಡಿರುವ ಕೇಬಲ್‌ ಟಿ.ವಿ ವ್ಯವಸ್ಥೆಯನ್ನು ಸರಿಪಡಿಸಿ ವಿಶ್ವಕಪ್‌ ಫುಟ್‌ಬಾಲ್ ಪಂದ್ಯಗಳನ್ನು ವೀಕ್ಷಿಸಲು ಅನುವು ಮಾಡಿಕೊಡಬೇಕೆಂದು ಅರ್ಜೆಂಟೀ ನಾದ ಜೈಲೊಂದರಲ್ಲಿ ಕೈದಿಗಳು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

‘ಕಳೆದ ಕೆಲವು ದಿನಗಳ ಹಿಂದೆ ಕೇಬಲ್‌ ಸಂಪರ್ಕ ಕಡಿತಗೊಂಡಿದೆ. ತಕ್ಷಣವೇ ಸಂಪರ್ಕ ಕಲ್ಪಿಸಬೇಕು. ಈ ಸಮಸ್ಯೆಗೆ ಪರಿಹಾರ ಸಿಗುವವರೆಗೂ ನಾವು ಆಹಾರ ಸೇವಿಸುವುದಿಲ್ಲ’ ಎಂದು ಇಲ್ಲಿನ ಪುಯೆರ್ಟೊ ಮ್ಯಾದ್ರಿ ನ್‌ನ ಜೈಲಿನಲ್ಲಿರುವ ಸತ್ಯಾಗ್ರಹ ನಿರತ ಒಂಬತ್ತು ಮಂದಿ ಕೈದಿಗಳು ಹೇಳಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಕೈದಿಗಳು ನ್ಯಾಯಾಲಯದಲ್ಲಿ ಮೊಕದ್ದಮೆ ಕೂಡ ದಾಖಲಿಸಿದ್ದಾರೆ.

ಡಿ ಗುಂಪಿನಲ್ಲಿರುವ ಅರ್ಜೆಂಟೀನಾ ತಂಡವು ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಐಸ್‌ಲ್ಯಾಂಡ್‌ ತಂಡವನ್ನು ಎದುರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry