ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರವಂಕರದಿಂದ ಮನೆ ಖರೀದಿ ಮರು ಮಾರಾಟ ಯೋಜನೆ ಜಾರಿ

Last Updated 13 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಸತಿ ಯೋಜನೆಗಳನ್ನು ನಿರ್ಮಿಸುವ ಪುರವಂಕರ ಸಂಸ್ಥೆಯು ತನ್ನ ಗ್ರಾಹಕರಿಗೆ ಮನೆ ಬದಲಾವಣೆ ಮತ್ತು ಮನೆ ಮರು ಮಾರಾಟ ಸಲಹೆ ಯೋಜನೆಗಳನ್ನು ಪ್ರಕಟಿಸಿದೆ.

‘ಈ ಯೋಜನೆಯು ‘ಬಿಗ್‌ 72 ಅವರ್ಸ್ ಹೋಮ್‌ ಫೆಸ್ಟ್‌’ನ ಭಾಗವಾಗಿದ್ದು, ವಾಹನ ಉದ್ಯಮದಲ್ಲಿ ‘ಹಳೆಯ ಕಾರನ್ನು ಹೊಸ ಕಾರಿಗೆ ಬದಲಿಸಿಕೊಳ್ಳಿ’ ಮಾದರಿಯಲ್ಲಿಯೇ ಪುರವಂಕರದಲ್ಲಿ ಈಗಾಗಲೇ ಖರೀದಿಸಿರುವ ಮನೆಯನ್ನು ಮಾರಾಟ ಮಾಡುವ ಮೂಲಕ ಇನ್ನಷ್ಟು ಸುಸಜ್ಜಿತ ಹೊಸ ಮನೆ ಖರೀದಿಗೆ ಅವಕಾಶ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಗ್ರಾಹಕರು ತಮ್ಮ ಹಾಲಿ ಮನೆಯನ್ನು ವ್ಯವಸ್ಥಿತ ಕ್ರಮದಲ್ಲಿ ಮಾರಾಟ ಮಾಡಿ, ಹೊಸ ಮನೆಯನ್ನು ಅಗತ್ಯ ಹಣಕಾಸು ಸೇವೆಗಳೊಂದಿಗೆ ಖರೀದಿಸಲು ನೆರವು ನೀಡಲಾಗುವುದು’ ಎಂದು ಪುರವಂಕರ ಲಿಮಿಟೆಡ್‌ನ ಸಿಒಒ ಆನಂದ್ ನಾರಾಯಣನ್‌ ಮಾಹಿತಿ ನೀಡಿದರು.

‘ಈ ಯೋಜನೆಗಾಗಿ ಸಂಸ್ಥೆಯು ಪ್ರಮುಖ ಬ್ಯಾಂಕ್‌ಗಳು, ದಲ್ಲಾಳಿಗಳ ಜತೆಗೆ ಕೈಜೋಡಿಸಲಿದೆ. ಮುಂಚೂಣಿಯಲ್ಲಿರುವ ರಿಯಲ್‌ ಎಸ್ಟೇಟ್‌ ಜಾಲತಾಣಗಳೊಂದಿಗೂ ಸಹಭಾಗಿತ್ವ ಹೊಂದಿದೆ. ಮನೆ ಮಾರಾಟ ಪ್ರಕ್ರಿಯೆ ಸಂಕೀರ್ಣ ವ್ಯವಸ್ಥೆಯಿಂದ ಕೂಡಿದೆ. ಇದರಿಂದ ವಿಳಂಬವಾಗುತ್ತಿದೆ. ಹೀಗಾಗಿ ಗ್ರಾಹಕರಿಗೆ ಕಡಿಮೆ ಅವಧಿಯಲ್ಲಿ ಉತ್ತಮ ಮೌಲ್ಯ ತಂದುಕೊಡಲು ಅಗತ್ಯ ಸಲಹೆ, ಮಾರ್ಗದರ್ಶನವನ್ನು ಸಂಸ್ಥೆ ನೀಡಲಿದೆ. ಎಲ್ಲವೂ ಪಾರದರ್ಶಕವಾಗಿರಲಿದೆ.

‘ಜೂನ್‌ 15 ರಿಂದ 17ರವರೆಗೆ ಬೆಂಗಳೂರಿನ ಹೋಟೆಲ್‌ ಲಲಿತ್ ಅಶೋಕ್‌ದಲ್ಲಿ ಮನೆಗಳ ಮರು ಮಾರಾಟ ಮೇಳವು ನಡೆಯಲಿದ್ದು, ನೋಂದಾಯಿತ ಬಳಕೆದಾರರು ಭಾಗವಹಿಸಬಹುದು. ಹೊಸದಾಗಿ ಮನೆ ಖರೀದಿಸಲು ಬಯಸುವವರಿಗೆ ಮತ್ತು ಮನೆ ಮೇಲ್ದರ್ಜೆಗೆ ಏರಿಸಲು ಬಯಸುವವರಿಗೆ ಅನುಕೂಲವಾಗಲಿದೆ. ಆಕರ್ಷಕ ದರ ಮತ್ತು ಪಾವತಿ ಯೋಜನೆ ಲಭ್ಯವಿದೆ.

‘ಬೆಂಗಳೂರಿನಲ್ಲಿ ಪ್ರತಿ 10 ನಿವಾಸಿಗಳಲ್ಲಿ ಎಂಟು ಜನರು ತಮ್ಮ ಹಾಲಿ ಮನೆಯನ್ನು ಮಾರಾಟ ಮಾಡಲು ಬಯಸುತ್ತಿದ್ದು, ಹೆಚ್ಚಿನವರಿಗೆ ಮಾರುವುದು, ಸೂಕ್ತ ಬೆಲೆ ನಿಗದಿ ವಿಷಯದಲ್ಲಿ ದಾರಿ ತಪ್ಪಿಸಲಾಗುತ್ತಿದೆ. ಅವರಿಗೆ ಬೇಕಾದ ಮನೆ ಖರೀದಿಸಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತದಲ್ಲಿಯೇ ಮೊದಲ ಬಾರಿಗೆ ಮನೆ ಬದಲಾವಣೆ ಮತ್ತು ಮರು ಮಾರಾಟ ಯೋಜನೆ ರೂಪಿಸಿದ್ದೇವೆ’ ಎಂದು ವಿವರಿಸಿದರು.

‘ಈ ವಿಶಿಷ್ಟ ಯೋಜನೆಯನ್ನು ಸದ್ಯ ಬೆಂಗಳೂರಿನಲ್ಲಿ ಜಾರಿಗೊಳಿಸಲಾಗುತ್ತಿದ್ದು, ನಂತರ ಹಂತ ಹಂತವಾಗಿ ಬೇರೆ ನಗರಗಳಿಗೂ ವಿಸ್ತರಿಸಲಾಗುವುದು’ ಎಂದು ಹೇಳಿದರು.

ಮಾಹಿತಿಗೆ: 080 4455 5555.  ಉಚಿತ ಕರೆ ಸಂಖ್ಯೆ– 1860 208 0000

ಯೋಜನೆಯ ಪ್ರಮುಖ ಅಂಶಗಳು

*ಸಂಸ್ಥೆಯ ಹೊಸ ಮನೆ ಖರೀದಿಗೆ ವಿವಿಧ ರೀತಿಯ ಪಾವತಿ ಆಯ್ಕೆಗಳಿವೆ

*ಮೌಲ್ಯಾಧಾರಿತ ಸಂಸ್ಥೆಗಳಿಂದ ‘ಥರ್ಡ್‌ ಪಾರ್ಟಿ’ಯ ಪ್ರಮಾಣಪತ್ರ

*ಸುಲಭ ಸಾಲ ಸೌಲಭ್ಯಕ್ಕೆ ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್‌ಗಳ ಜತೆಗೆ ಒಪ್ಪಂದ

*ಬ್ರೋಕರ್‌ಗಳಿಂದ ಅಗತ್ಯ ಸಲಹೆ

*ಹೌಸಿಂಗ್‌ ಡಾಟ್‌ ಕಾಂ ಮತ್ತು 99ಏಕರ್ಸ್‌ನಲ್ಲಿ ಹೆಸರು ನೋಂದಣಿ ಮಾಡಬಹುದು

*ಮರು ಮಾರಾಟ ಮೇಳದಲ್ಲಿ ಬಾಗವಹಿಸಲು ಅವಕಾಶ

*ಒಂದೇ ಸೂರಿನಡಿಯಲ್ಲಿ ಸರಳ ಪ್ರಕ್ರಿಯೆ ಮೂಲಕ ಹಳೆಯ ಮನೆ  ಮರು ಮಾರಾಟ ಮಾಡಲು ನೆರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT