ಆಯುಷ್ಮಾನ ಪ್ಯಾಕೇಜ್‌ಗೆ ವಿರೋಧ

7

ಆಯುಷ್ಮಾನ ಪ್ಯಾಕೇಜ್‌ಗೆ ವಿರೋಧ

Published:
Updated:

ನವದೆಹಲಿ: ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಗೆ, ಆರಂಭಕ್ಕೂ ಮುನ್ನವೇ ತೊಡಕು ಎದುರಾಗಿದೆ. ಯೋಜನೆ ಅಡಿ ನಿಗದಿ ಮಾಡಿರುವ ಚಿಕಿತ್ಸಾ ವೆಚ್ಚಕ್ಕೆ ಖಾಸಗಿ ಆಸ್ಪತ್ರೆಗಳು ವಿರೋಧ ವ್ಯಕ್ತಪಡಿಸಿವೆ.

‘ಕೇಂದ್ರ ನಿಗದಿ ಮಾಡಿರುವ ಪ್ಯಾಕೇಜ್ ತೀರಾ ಕಡಿಮೆ ಮೊತ್ತದ್ದಾಗಿದೆ. ಆ ಪ್ಯಾಕೇಜ್‌ನ ಮೊತ್ತವನ್ನು ಇನ್ನೂ ಶೇ 30–40ರಷ್ಟು ಹೆಚ್ಚಿಸಿದರೂ, ರೋಗಿಗೆ ನೀಡಿದ ಚಿಕಿತ್ಸೆಯ ವೆಚ್ಚವೂ ದಕ್ಕುವುದಿಲ್ಲ. ಇನ್ನು ಲಾಭದ ಮಾತೆಲ್ಲಿ’ ಎಂದು ಆರೋಗ್ಯಸೇವೆ ಒದಗಿಸುವವರ ಸಂಘದ ಅಧ್ಯಕ್ಷ ಅಲೆಕ್ಸಾಂಡರ್ ಥಾಮಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ನೀತಿ ಆಯೋಗಕ್ಕೂ ಪತ್ರ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry