ಭೀಕರ ಅಪಘಾತ ಇಬ್ಬರ ಸಾವು

7

ಭೀಕರ ಅಪಘಾತ ಇಬ್ಬರ ಸಾವು

Published:
Updated:

ದಾವಣಗೆರೆ: ಇಲ್ಲಿನ ಬಾಡಾ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಯುವಕರು ದಾರುಣವಾಗಿ ಸಾವು ಕಂಡಿದ್ದಾರೆ.

ಮೃತರನ್ನು ಶಿವಮೊಗ್ಗದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಕಾಶ್‌ ಅವರ ಪುತ್ರ ಜೈದೀಪಗೌಡ (23) ಹಾಗೂ ಆತನ ಸ್ನೇಹಿತ, ದಾವಣ

ಗೆರೆಯ ಸರೋವರ ಸತ್ಯನಾರಾಯಣ (25) ಎಂದು ಗುರುತಿಸಲಾಗಿದೆ. ಹೊನ್ನಾಳಿ ಮಾಜಿ ಶಾಸಕರಾದ ಜಿ.ಡಿ. ಶಾಂತನಗೌಡ ಅವರ ಸಹೋದರ ಬಸವನಗೌಡರ ಮೊಮ್ಮಗ ಜೈದೀಪಗೌಡ. ಅವರು ನಗರದ ಧವನ್‌ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದರು.

ಮಹೀಂದ್ರ ಎಕ್ಸ್‌ಯುವಿ 500 ಕಾರಿನಲ್ಲಿ ಜೈದೀಪಗೌಡ ಹಾಗೂ ಸರೋವರ ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಗವಾಗಿ ಬರುತ್ತಿರುವಾಗ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕ ಗುದ್ದಿಕೊಂಡು ಪಕ್ಕದ ರಸ್ತೆಗೆ ಹಾರಿಬಿದ್ದಿದೆ. ಈ ವೇಳೆ ಎದುರಿನಿಂದ ಬಂದ ಲಾರಿಯೊಂದು ಕಾರ್‌ಗೆ ಡಿಕ್ಕಿ ಹೊಡೆಯಿತು. ಲಾರಿ ಗುದ್ದಿದ ರಭಸಕ್ಕೆ ಕಾರ್‌ ಮತ್ತೆ ಪಕ್ಕದ ಬದಿಯ ರಸ್ತೆಗೆ ನುಗ್ಗಿದೆ. ಕಾರಿನಲ್ಲಿದ್ದ ಇಬ್ಬರ ದೇಹಗಳು ಛಿದ್ರವಾಗಿದ್ದವು. ಡಿವೈಡರ್‌ ಒಳಗೆ ದೇಹಗಳು ಸಿಲುಕಿಕೊಂಡಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry