ಕಾಂಗ್ರೆಸ್‌ ತೆಕ್ಕೆಗೆ ಜಯನಗರ ಕ್ಷೇತ್ರ

7

ಕಾಂಗ್ರೆಸ್‌ ತೆಕ್ಕೆಗೆ ಜಯನಗರ ಕ್ಷೇತ್ರ

Published:
Updated:

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ 2,889 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

ದಶಕಗಳಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಈ ಮೂಲಕ ಕಾಂಗ್ರೆಸ್‌ ಕಿತ್ತುಕೊಂಡಿದೆ. ವಿಧಾನಸಭೆಯಲ್ಲಿ ‘ಕೈ’ ಬಲ 79ಕ್ಕೆ ಏರಿದೆ.

ಇಲ್ಲಿ ಎರಡು ಬಾರಿ ಜಯಗಳಿಸಿದ್ದ ಬಿಜೆಪಿಯ ಬಿ.ಎನ್‌. ವಿಜಯಕುಮಾರ್‌ ಚುನಾವಣಾ ಪ್ರಚಾರದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದರು. ಹೀಗಾಗಿ ಚುನಾವಣೆಯನ್ನು ಜೂನ್‌ 11ಕ್ಕೆ ಮುಂದೂಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry