ಶಿಕ್ಷಕರ ಬವಣೆ

7

ಶಿಕ್ಷಕರ ಬವಣೆ

Published:
Updated:

ಸಾರ್ವಜನಿಕ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ, ಕಲಿಕಾ ಪ್ರಗತಿ, ವರ್ಗಾವಣೆ ಪ್ರಮಾಣಪತ್ರ ನೀಡುವುದು ಇವೇ ಮೊದಲಾದ ಪ್ರಕ್ರಿಯೆಗಳನ್ನು ಆನ್‍ಲೈನ್ ಮೂಲಕ ನಿರ್ವಹಿಸಲು ಶಿಕ್ಷಣ ಕಿರಣ ಹೆಸರಿನ ತಂತ್ರಾಂಶ ರೂಪಿಸಿದ್ದು ಅದು ಬಳಕೆಯಲ್ಲಿರುವುದು ಸರಿಯಷ್ಟೆ. ಆದರೆ ಈ ತಂತ್ರಾಂಶವನ್ನು ನಿರ್ವಹಿಸಲು ಶಿಕ್ಷಕರು ಹರಸಾಹಸಪಡುತ್ತಿದ್ದು ಇಂಟರ್‍ನೆಟ್ ಸೆಂಟರ್‍ಗಳಿಗೆ ಎಡತಾಕುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಸರ್ವರ್ ಪದೇ ಪದೇ ಕೈಕೊಡುವುದರಿಂದ ಶಿಕ್ಷಕರು ಹಗಲು– ರಾತ್ರಿಯೆನ್ನದೆ ತಂತ್ರಾಂಶದಲ್ಲಿ ಮಾಹಿತಿ ತುಂಬಲು ಕಷ್ಟಪಡುತ್ತಿದ್ದಾರೆ. ಶಿಕ್ಷಣ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡು ಸಮಸ್ಯೆ ನಿವಾರಿಸಲಿ. ಶಿಕ್ಷಕರ ಬವಣೆ ನೀಗಿಸಲಿ.

–ಪುಟ್ಟದಾಸು, ಮಂಡ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry