ಕಿರಿಕಿರಿ ನಿವಾರಣೆ ಅಗತ್ಯ

7

ಕಿರಿಕಿರಿ ನಿವಾರಣೆ ಅಗತ್ಯ

Published:
Updated:

ಪ್ರಾರ್ಥನಾ ಮಂದಿರಗಳಲ್ಲಿ ಧ್ವನಿವರ್ಧಕ ಬಳಕೆಯಿಂದ ಆಗುತ್ತಿರುವ ಶಬ್ದಮಾಲಿನ್ಯದ ಕಿರಿಕಿರಿ ಬಗ್ಗೆ ಹಿರಿಯ ಸಾಹಿತಿ ಹಂಪ ನಾಗರಾಜಯ್ಯನವರು ಧ್ವನಿಯೆತ್ತಿದ್ದಾರೆ. ಇನ್ನೂ ಹಲವು ಚಿಂತಕರು ಇದೇ ರೀತಿ ಹೇಳಿಕೆ ನೀಡಿದ್ದಾರೆ. ಇವರ ಚಿಂತನೆ ನಿಜಕ್ಕೂ ಚಿಂತನಾರ್ಹ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ನಮ್ಮ ಸಮಾಜ ಯೋಚಿಸಬೇಕು.

ಬೆಳಗಿನ ಜಾವ ಏಕಾಗ್ರತೆಯಿಂದ ಓದುವ ವಿದ್ಯಾರ್ಥಿಗಳ ಸಮೂಹಕ್ಕೆ ಈ ಬಗೆಯ ಕಿರಿಕಿರಿಯಿಂದ ಆಗುವ ತೊಂದರೆ ಹೇಳತೀರದು. ಇದನ್ನು ತಪ್ಪಿಸುವ ಕುರಿತು ಎಲ್ಲಾ ಜಾತಿ– ಧರ್ಮದವರು ಗಮನ ಹರಿಸಬೇಕು.

–ಎಚ್.ಬಿ. ಶ್ರೀಕಂಠಮೂರ್ತಿ, ರಂಗೇನಹಳ್ಳಿ‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry