ಟೆಸ್ಟ್‌ ಕ್ರಿಕೆಟ್‌ಗೆ ಅಫ್ಗಾನಿಸ್ತಾನ ಪದಾರ್ಪಣೆ: ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ

7

ಟೆಸ್ಟ್‌ ಕ್ರಿಕೆಟ್‌ಗೆ ಅಫ್ಗಾನಿಸ್ತಾನ ಪದಾರ್ಪಣೆ: ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ

Published:
Updated:
ಟೆಸ್ಟ್‌ ಕ್ರಿಕೆಟ್‌ಗೆ ಅಫ್ಗಾನಿಸ್ತಾನ ಪದಾರ್ಪಣೆ: ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ

ಬೆಂಗಳೂರು: ಅಫ್ಗಾನಿಸ್ತಾನ ತಂಡವು ಭಾರತದ ಕ್ರಿಕೆಟ್‌ ತಂಡದ ಜತೆ ಟೆಸ್ಟ್‌ ಕ್ರಿಕೆಟ್‌ಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಪದಾರ್ಪಣೆ ಮಾಡಿದೆ. ಟಾಸ್‌ ಗೆದ್ದಿರುವ ಭಾರತ ಬ್ಯಾಟಿಂಗ್‌ ಆಯ್ದುಕೊಂಡಿದೆ.

ಅಫ್ಗನ್‌ ತಂಡ ದುರ್ಬಲ ಎಂದು ಗೋಚರಿಸುತ್ತಿದ್ದರೂ, ಆ ತಂಡದಲ್ಲಿನ ಐವರು ಸ್ಪಿನ್ನರ್‌ಗಳನ್ನು ಎದುರಿಸಲು ಭಾರತದ ಬ್ಯಾಟ್ಸ್‌ಮನ್‌ಗಳು ಎಚ್ಚರ ವಹಿಸಬೇಕಿದೆ. ಸ್ಪಿನ್ನರ್‌ಗಳಾದ ಮಹಮ್ಮದ್‌ ನಬಿ, ರಶೀದ್‌ ಖಾನ್‌, ಮುಜೀಬ್ ಉರ್ ರೆಹಮಾನ್, ಜಹೀರ್‌ ಖಾನ್‌ ಮತ್ತು ಎಡಗೈ ಸ್ಪಿನ್ನರ್‌ ಅಮಿರ್ ಹಮ್ಜಾ ಆಡಿರುವ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. 

ಈ ಸ್ಪಿನ್ನರ್‌ಗಳಲ್ಲಿ ಕೆಲವರನ್ನು ಭಾರತೀಯ ಬ್ಯಾಟಿಂಗ್‌ ಪಡೆ ಐಪಿಎಲ್‌ನಲ್ಲಿ ಎದುರಿಸಿದೆ. ಹಾಗಾಗಿ ಸ್ಪಿನ್ನರ್‌ಗಳ ಕೈತಿರುವುಗಳ ಪರಿಚಯ ಇದೆ.

ಈ ಪಂದ್ಯದಲ್ಲಿ ಹೊಸ ಆಟಗಾರರಿಗೆ ಅವಕಾಶ ನೀಡಿರುವುದರಿಂದ ನಾಯಕ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲು ಹೆಚ್ಚು ಶ್ರಮವಹಿಸಬೇಕಿದೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರಂತಹ ಪ್ರಮುಖ ಆಟಗಾರರ ಸ್ಥಾನ ತುಂಬಿರುವ ಕರುಣ್ ನಾಯರ್, ದಿನೇಶ್ ಕಾರ್ತಿಕ್ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಈ ಟೆಸ್ಟ್‌ ವೇದಿಕೆಯಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎರಡು ತಂಡಕ್ಕೆ ಟ್ವಿಟರ್‌ನಲ್ಲಿ ಶುಭಕೋರಿದ್ದಾರೆ. 

ತಂಡಗಳು ಇಂತಿವೆ
ಭಾರತ: ಅಜಿಂಕ್ಯ ರಹಾನೆ (ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಕರುಣ್ ನಾಯರ್, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ರವೀಂದ್ರ ಜಡೇಜ, ಇಶಾಂತ್ ಶರ್ಮಾ, ಉಮೇಶ್ ಯಾದವ್, ರವಿಶಾಸ್ತ್ರಿ (ಮುಖ್ಯ ಕೋಚ್), ಭರತ್ ಅರುಣ್ (ಬೌಲಿಂಗ್ ಕೋಚ್), ಸಂಜಯ್ ಬಂಗಾರ್ (ಬ್ಯಾಟಿಂಗ್ ಕೋಚ್).

ಅಫ್ಗಾನಿಸ್ತಾನ: ಅಸ್ಗರ್ ಸ್ಥಾನಿಕಜಾಯ್ (ನಾಯಕ), ಮೊಹಮ್ಮದ್ ಶೆಹಜಾದ್, ಜಾವೇದ್ ಅಹಮದಿ, ರೆಹಮತ್ ಶಾ, ನಾಸೀರ್ ಜಮಾಲ್, ಹಶಮುತ್‌ ಉಲ್ಲಾ ಶಾಹೀದಿ, ಮೊಹಮ್ಮದ್ ನಬಿ, ಅಫ್ಸರ್ ಝಜಾಯ್ (ವಿಕೆಟ್‌ಕೀಪರ್), ರಶೀದ್ ಖಾನ್, ಅಮಿರ್ ಹಮ್ಜಾ, ಜಹೀರ್ ಖಾನ್, ಯಾಮಿನ್ ಅಹಮದ್‌ಜಾಯ್, ವಫಾದಾರ್, ಮುಜೀಬ್ ಉರ್ ರೆಹಮಾನ್,  ಫಿಲ್ ಸಿಮನ್ಸ್‌ (ಮುಖ್ಯ ಕೋಚ್).

*
ಇದನ್ನೂ ಓದಿರಿ..
ಇತಿಹಾಸ ರಚನೆಗೆ ಚಿನ್ನಸ್ವಾಮಿ ಅಂಗಳ ಸಜ್ಜು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry