ಉಗ್ರ ಸಮೀರ್ ಟೈಗರ್ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಯೋಧನ ಅಪಹರಣ

7

ಉಗ್ರ ಸಮೀರ್ ಟೈಗರ್ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಯೋಧನ ಅಪಹರಣ

Published:
Updated:
ಉಗ್ರ ಸಮೀರ್ ಟೈಗರ್ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಯೋಧನ ಅಪಹರಣ

ಶೋಪಿಯಾನ್/ಜಮ್ಮುಕಾಶ್ಮೀರ: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸಮೀರ್ ಟೈಗರ್ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಸೇನೆಯ ಯೋಧರೊಬ್ಬರು ಪುಲ್ವಾಮ ಎಂಬಲ್ಲಿ ಅಪಹರಣಕ್ಕೊಳಗಾಗಿದ್ದಾರೆ.

ಅಪಹೃತ ಯೋಧರನ್ನು ಔರಂಗಜೇಬ್ ಎಂದು ಗುರುತಿಸಲಾಗಿದ್ದು, ಇವರು ಪೂಂಚ್ ಎಂಬಲ್ಲಿ ನೆಲೆಸಿದ್ದಾರೆ.

ಇವರು 44 ರಾಷ್ಟ್ರೀಯ ರೈಫಲ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶೋಪಿಯಾನ್‌ನಲ್ಲಿ ಭಯೋತ್ಪಾದನಾ ನಿಗ್ರಹ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು.

ಯೋಧ ಔರಂಗಜೇಬ್ ಕೆಲಸ ಮುಗಿಸಿ ಖಾಸಗಿ ಬಸ್ಸಿನಲ್ಲಿ ಮನೆಗೆ ಹೋಗುತ್ತಿದ್ದರು.ಈ ವೇಳೆ ಯೋಧ ತೆರಳುತ್ತಿದ್ದ ಬಸ್ಸನ್ನು ಅಡ್ಡಗಟ್ಟಿದ ಶಸ್ತ್ರಸಜ್ಜಿತ ಉಗ್ರರ ಗುಂಪು ಅವರನ್ನು ಅಪಹರಿಸಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಜಮ್ಮುಕಾಶ್ಮೀರ ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry