ತುಮಕೂರು: ಚರ್ಚ್ ಹುಂಡಿ ಒಡೆದು ಕಳತನ

7

ತುಮಕೂರು: ಚರ್ಚ್ ಹುಂಡಿ ಒಡೆದು ಕಳತನ

Published:
Updated:
ತುಮಕೂರು: ಚರ್ಚ್ ಹುಂಡಿ ಒಡೆದು ಕಳತನ

ತುಮಕೂರು: ನಗರದ ರೈಲ್ವೆ ಸ್ಟೇಶನ್ ರಸ್ತೆಯ ಸಂತ ಅಂತೋಣಿ ಚರ್ಚ್‌ನಲ್ಲಿ ಬುಧವಾರ ರಾತ್ರಿ ಹುಂಡಿ ಒಡೆದು ಕಳವು ಮಾಡಲಾಗಿದೆ.

ಮುಖ್ಯದ್ವಾರದ ಬೀಗ ಮುರಿದ ಕಳ್ಳರು ದೊಡ್ಡ ಹುಂಡಿ ಹಾಗೂ ನಾಲ್ಕು ಚಿಕ್ಕ ಹುಂಡಿ ಒಡೆದು ಕಳವು ಮಾಡಿದ್ದಾರೆ.

ಚರ್ಚ್‌ನಲ್ಲಿನ ಪರಮ ಪ್ರಸಾದ ಪೆಟ್ಟಗೆಯನ್ನು ಒಡೆದು ಹಣಕ್ಕಾಗಿ ಹುಡುಕಾಡಿದ್ದಾರೆ.

ಚರ್ಚ್‌ನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಚರ್ಚ್‌ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಗುರುವಾರ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಚರ್ಚ್‌ ಸ್ವಚ್ಛತಾ ಕಾರ್ಯ ಮಾಡುವ ಮಹಿಳೆ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.

ಹುಂಡಿಗಳಲ್ಲಿ ಎಷ್ಟು ಹಣ ಇತ್ತು ಎಂಬುದು ತಿಳಿದಿಲ್ಲ ಚರ್ಚ್ ಮೂಲಗಳು ತಿಳಿಸಿವೆ.

ಪೊಲೀಸರು, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry