ಶಾಸಕರು ಪ್ರತ್ಯೇಕ ಸಭೆ ನಡೆಸಿದರೆ ಶಿಸ್ತುಕ್ರಮ: ಕೆ.ಸಿ.ವೇಣುಗೋಪಾಲ್‌

7

ಶಾಸಕರು ಪ್ರತ್ಯೇಕ ಸಭೆ ನಡೆಸಿದರೆ ಶಿಸ್ತುಕ್ರಮ: ಕೆ.ಸಿ.ವೇಣುಗೋಪಾಲ್‌

Published:
Updated:
ಶಾಸಕರು ಪ್ರತ್ಯೇಕ ಸಭೆ ನಡೆಸಿದರೆ ಶಿಸ್ತುಕ್ರಮ: ಕೆ.ಸಿ.ವೇಣುಗೋಪಾಲ್‌

ಬೆಂಗಳೂರು: ಸಂಪುಟ ವಿಸ್ತರಣೆ ವೇಳೆ ಕೆಲವರು ಅತೃಪ್ತಿ ಹೊರ ಹಾಕುವುದು ಸಹಜ. ಸಚಿವ ಸ್ಥಾನಕ್ಕೆ ಎಲ್ಲ ಶಾಸಕರೂ ಅರ್ಹರಾಗಿದ್ದಾರೆ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ತಿಳಿಸಿದರು.

‘ಪ್ರಸ್ತುತ ಆಯ್ಕೆಯಾದ ಸಚಿವರ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡುತ್ತೇವೆ. ತೃಪ್ತಿ ಅನಿಸದಿದ್ದರೆ ಅಂಥವರನ್ನು ಬದಲಾವಣೆ ಮಾಡುತ್ತೇವೆ. ಆಗ ಬೇರೆಯವರಿಗೂ ಅವಕಾಶ ಸಿಗಲಿದೆ’ ಎಂದು ಅವರು ಗುರುವಾರ ಪಕ್ಷದಲ್ಲಿನ ಸಚಿವರ ಅಸಮಾಧಾನಕ್ಕೆ ತೆರೆ ಎಳೆಯಲು ಯತ್ನಿಸಿದರು.

ಕಳೆದ 10 ದಿನಗಳಿಂದ ರಾಜ್ಯದ ಎಲ್ಲಾ ಬೆಳವಣಿಗೆಗಳನ್ನು ಎಐಸಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಂದಿನಿಂದ ಯಾರೇ ಶಾಸಕರು, ಪ್ರತ್ಯೇಕ ಸಭೆ ನಡೆಸಿದರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಅವರು ಎಚ್ಚರಿಕೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry