ಮಾಧವನ್‌ ಜೋಡಿಯಾಗಿ ಶ್ರದ್ಧಾ ಶ್ರೀನಾಥ್‌

7

ಮಾಧವನ್‌ ಜೋಡಿಯಾಗಿ ಶ್ರದ್ಧಾ ಶ್ರೀನಾಥ್‌

Published:
Updated:
ಮಾಧವನ್‌ ಜೋಡಿಯಾಗಿ ಶ್ರದ್ಧಾ ಶ್ರೀನಾಥ್‌

‘ವಿಕ್ರಮ್‌ ವೇದ’ ಚಿತ್ರದಲ್ಲಿ ಮಾಧವನ್‌ ಜೋಡಿಯಾಗಿ ಶ್ರದ್ಧಾ ಶ್ರೀನಾಥ್‌ ನಟಿಸಿದ್ದರು. ಈಗ ತಮಿಳಿನ ‘ಮಾರ’ ಚಿತ್ರದಲ್ಲಿ ಮಾಧವನ್‌ ಹಾಗೂ ಶ್ರದ್ಧಾ ಶ್ರೀನಾಥ್‌ ಮತ್ತೊಮ್ಮೆ ಜೋಡಿಯಾಗಿದ್ದಾರೆ.

ರೋಮ್ಯಾಂಟಿಕ್‌ ಡ್ರಾಮಾ ಕತೆಯುಳ್ಳ ಈ ಚಿತ್ರವನ್ನು ನಿರ್ದೇಶಕ ದಿಲೀಪ್‌ ಕುಮಾರ್‌ ಅವರು ನಿರ್ದೇಶನ ಮಾಡಲಿದ್ದಾರೆ. ಇದು ದಿಲೀಪ್‌ ಅವರ ಮೊದಲ ಚಿತ್ರ. ಈ ಮೊದಲು ಅವರು 40 ನಿಮಿಷದ ಕಿರುಚಿತ್ರವೊಂದನ್ನು ನಿರ್ಮಾಣ ಮಾಡಿದ್ದರು. ಶ್ರದ್ಧಾ ಶ್ರೀನಾಥ್‌ ಅವರು ತಮಿಳಿನಲ್ಲಿ ನಟಿಸುತ್ತಿರುವ ಎರಡನೇ ಚಿತ್ರವಿದು. ಜೂನ್‌ 18ರಂದು ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಪಾಂಡಿಚೇರಿಯಲ್ಲಿ ಮೊದಲ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌ ಅವರು ಸ್ವತಂತ್ರವಾಗಿ ಆಲೋಚನೆ ಮಾಡುವ, ನಿರ್ಧಾರ ಕೈಗೊಳ್ಳುವ ಬೋಲ್ಡ್‌ ಯುವತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಟ್ರಾವೆಲಿಂಗ್‌, ಲವ್‌ ಸ್ಟೋರಿ ಎನ್ನುತ್ತಾರೆ ಶ್ರದ್ಧಾ.

ಈಗ ತಮಿಳು ಭಾಷೆಯಲ್ಲಿ ಎರಡನೇ ಚಿತ್ರದಲ್ಲೂ ಮಾಧವನ್‌ ಜೊತೆ ನಾಯಕಿಯಾಗಿ ನಟಿಸುತ್ತಿರುವುದಕ್ಕೆ ಶ್ರದ್ದಾಗೆ ಖುಷಿಯಿದೆ. ‘ವಿಕ್ರಮ್‌ ವೇದ’ ಚಿತ್ರದಲ್ಲೂ ಮಾಧವನ್‌ ಜೊತೆ ನಟಿಸಿದ್ದೆ. ಖ್ಯಾತ ನಟರ ಜೊತೆ ನಟಿಸುವ ಅವಕಾಶ ಸಿಗುತ್ತಿರುತ್ತದೆ. ಆದರೆ ಈಗ ನನಗೆ ಎರಡನೇ ಚಿತ್ರದಲ್ಲೂ ಅವರ ಜೊತೆಗೇ ನಟಿಸುವ ಅವಕಾಶ ಇದೆ. ಹೊಸಬರ ಜೊತೆ ನಟಿಸುವಾಗ ಅವರನ್ನು ಅರ್ಥ ಮಾಡಿಕೊಳ್ಳಲು ಕೊಂಚ ಸಮಯ ಬೇಕಾಗುತ್ತದೆ. ಆಗಲೇ ಕೆಮಿಸ್ಟ್ರಿ ಚೆನ್ನಾಗಾಗುತ್ತೆ. ಆದರೆ ಈ ಚಿತ್ರದಲ್ಲಿ ಮಾಧವನ್‌ ಜೊತೆ ಕೆಲಸಮಾಡಿರುವ ಅನುಭವದಿಂದ ಈ ಚಿತ್ರದಲ್ಲಿ ಇನ್ನೂ ಚೆನ್ನಾಗಿ ಅಭಿನಯಿಸಬಹುದು’ ಎಂದು ಹೇಳುತ್ತಾರೆ ಶ್ರದ್ಧಾ.

ಚಿತ್ರದ ಕತೆ ತುಂಬಾ ಚೆನ್ನಾಗಿದೆ. ಹೊಸಬರ ಚಿತ್ರತಂಡ. ಹೀಗಾಗಿ ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬರಲಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಿರುವ ನಟಿ ಶ್ರದ್ಧಾ, ವಿಕ್ರಮ್‌ ವೇದ ಚಿತ್ರವು ಬಿಡುಗಡೆಗಿಂತ ಮೊದಲು ಹೆಚ್ಚು ಪ್ರಚಾರ ಪಡೆದಿರಲಿಲ್ಲ. ಆದರೆ ಆ ಬಳಿಕ ಆ ಚಿತ್ರ ಬಾಕ್ಸ್‌ ಆಫೀಸಲ್ಲಿ ಎಲ್ಲರ ನಿರೀಕ್ಷೆಗಿಂತ ಬ್ಲಾಕ್‌ ಬಸ್ಟರ್‌ ಹಿಟ್‌ ಆಯಿತು. ‘ಮಾರ’ ಚಿತ್ರದಲ್ಲೂ ಇದೇ ನಡೆಯಲಿದೆ. ಈ ಚಿತ್ರದ ಕತೆ, ನಿರೂಪಣೆಯೂ ವಿಭಿನ್ನವಾಗಿದೆ’ ಎನ್ನುತ್ತಾರೆ ಶ್ರದ್ಧಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry