ಸೋಮವಾರ, ಮಾರ್ಚ್ 30, 2020
19 °C

ದಕ್ಷಿಣಾದಿಂದ ‘ಸಂಗಮಮ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣಾದಿಂದ ‘ಸಂಗಮಮ್‌’

ಅಮೆರಿಕದ ‘ದಕ್ಷಿಣಾ’ ಡಾನ್ಯಿಯಲ್‌ ಫೊನಿಕ್ಸ್‌ ಸಿಂಗ್‌ ಡಾನ್ಸ್‌ ಕಂಪನಿಯು ಶುಕ್ರವಾರ ನಗರದಲ್ಲಿ ‘ಸಂಗಮಮ್‌’ ಎಂಬ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದೆ.

ಎಟರ್ನಲ್‌ ಸ್ಪ್ರಿಂಗ್‌ (ಚಿರವಸಂತ) ಹಾಗೂ ಚಕ್ರ ಎಂಬ ಎರಡು ನೃತ್ಯಗಳನ್ನು ’ಸಂಗಮಮ್‌’ ಎನ್ನುವ ಹೆಸರಿನಲ್ಲಿ ಪ್ರಸ್ತುತ ಪಡಿಸುತ್ತಿದೆ. ಇಡೀ ಕಾರ್ಯಕ್ರಮ ಮಹಿಳಾ ಸಬಲೀಕರಣ, ಸಮಗ್ರತ್ವ ಹಾಗೂ ಸಂಘರ್ಷಗಳನ್ನು ಒಳಗೊಂಡಂತೆ ವಿನ್ಯಾಸಗೊಳಿಸಲಾಗಿದೆ ಎಂದು ದಕ್ಷಿಣಾದ ಸಂಸ್ಥಾಪಕ ಅಧ್ಯಕ್ಷ, ನೃತ್ಯ ಸಂಯೋಜಕ, ನಿರ್ದೇಶಕರೂ ಆಗಿರುವ ಡ್ಯಾನಿಯಲ್‌ ಫೋನಿಕ್ಸ್‌ ಸಿಂಗ್‌ ತಿಳಿಸುತ್ತಾರೆ.

ಜೀವನಚಕ್ರದಲ್ಲಿ ಬರುವ ಬದುಕಿನ ಎಲ್ಲ ಅವಸ್ಥೆಗಳನ್ನು ಅನುಭವಿಸುವ, ಆನಂದಿಸುವುದನ್ನು ಪ್ರಸ್ತುತಪಡಿಸುತ್ತದೆ. ಜಗತ್ತಿನಲ್ಲಿರುವ ಎಲ್ಲ ದುಃಖಗಳಿಗೆ ಜೀವನ ಸೌಂದರ್ಯ ಮತ್ತು ಜೀವನಪ್ರೀತಿಯೇ ಪರಿಹಾರವಾಗಿದೆ. ವಸಂತ ಕಾಲ ತಿರುತಿರುಗಿ ಬರುವಂತೆ ಒಳಿತಿನ ಸಮಯವೂ ಬರುತ್ತದೆ ಎಂಬ ಆಶಾಭಾವನೆಯೇ ಚಿರವಸಂತದ ಕಥೆಯಾಗಿದೆ.

ಚಕ್ರ ನೃತ್ಯದಲ್ಲಿ ಸುಭದ್ರೆಯ ಕಥೆಯನ್ನು ಪ್ರಸ್ತುತಪಡಿಸಲಾಗಿದೆ. ಮಹಾಭಾರತ ಮಹಾಕಾವ್ಯದ ಈ ಪಾತ್ರ ಭಾರತೀಯ ಸ್ವತಂತ್ರ ಮಹಿಳೆಯನ್ನು ಸಂಕೇತಿಸುವಂತಿದೆ. ಕುದರೆಗಳನ್ನು ಓಡಿಸುತ್ತಿದ್ದ, ಸಮರ ಕಲೆ ಬಲ್ಲ, ತನ್ನ ಆಯ್ಕೆಯನ್ನು ನಿರ್ಭಿಡೆಯಿಂದ ಹೇಳುವುದಲ್ಲದೇ ಕೃಷ್ಣನೊಂದಿಗೆ ಹೋಗುವ ಸುಭದ್ರ ಸಬಲೆಯಾಗಿ ಕಾಣಿಸುತ್ತಾಳೆ.  ಸ್ವತಂತ್ರ ನಿರ್ಧಾರ, ಸಮರ ಸಾಮರ್ಥ್ಯ ಎರಡನ್ನೂ ಪ್ರತಿಬಿಂಬಿಸುವ ಪಾತ್ರವಾಗಿದೆ. ಚಕ್ರ ನೃತ್ಯದಲ್ಲಿ ಸುಭದ್ರೆ ಮತ್ತು ಉತ್ತರೆಯ ಕಥೆಗಳನ್ನು ಪ್ರಸ್ತುತಪಡಿಸಲಿದ್ದಾರೆ.

ದಕ್ಷಿಣಾ ವಾಷಿಂಗ್ಟನ್‌ನಲ್ಲಿರುವ ನೃತ್ಯ ಕಂಪನಿಯಾಗಿದೆ. ತನ್ನ ಕಲಾವಿದರ ತಂಡದೊಂದಿಗೆ ಈ ಎರಡೂ ನೃತ್ಯಗಳನ್ನು ಪ್ರಸ್ತುತಪಡಿಸಲಿದೆ. ಯು.ಎಸ್‌ ಕೌನ್ಸಲೆಟ್‌ ಜನರಲ್‌ ಚೆನ್ನೈ ಹಾಗೂ ಅಭಿನವ ಡಾನ್ಸ್‌ ಕಂಪನಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಕೆ.ಇ.ಎ. ಪ್ರಭಾತ್‌ ರಂಗಮಂದಿರದಲ್ಲಿ ಶನಿವಾರ ಸಂಜೆ 6.30ಕ್ಕೆ ನೃತ್ಯ ಪ್ರದರ್ಶನವಿದೆ. ಉಚಿತ ಪ್ರವೇಶವಿದ್ದು, 6.15ಗೆ ಎಲ್ಲರೂ ತಮ್ಮ ಸ್ಥಳಗಳಲ್ಲಿ ಆಸೀನರಾಗಬೇಕು ಎಂದು ಆಹ್ವಾನ ಪತ್ರಿಕೆಯಲ್ಲಿ ಕೋರಿದ್ದಾರೆ.

ಕಲಾವಿದರ ಪರಿಚಯ

ಅಮೆರಿಕದ ಮೇರಿಲ್ಯಾಂಡ್‌ ವಿಶ್ವವಿದ್ಯಾಲಯದಲ್ಲಿ ನೃತ್ಯ ವಿಷಯದಲ್ಲಿ ಪದವಿ ಪಡೆದಿರುವ ಅರು ಅವರು ಅಂತರರಾಷ್ಟ್ರೀಯ ಖ್ಯಾತ ನೃತ್ಯಗಾರ್ತಿ. ನೃತ್ಯ ಪ್ರದರ್ಶನದ ಜತೆಗೆ ನೃತ್ಯ ಶಿಕ್ಷಕಿಯೂ ಆಗಿರುವ ಅವರು, ಡೆನ್ಮಾರ್ಕ್‌ ರಾಯಭಾರಿ ಕಚೇರಿಯ ಆಹ್ವಾನದ ಮೇರೆಗೆ ಡೆನ್ಮಾರ್ಕ್‌ನಲ್ಲೂ ನೃತ್ಯಪ್ರದರ್ಶಿಸಿದ್ದಾರೆ. 2016ರಿಂದ ’ದಕ್ಷಿಣಾ’ ಡಾನ್ಯಿಯಲ್‌ ಫೊನಿಕ್ಸ್‌ ಸಿಂಗ್‌ ಡಾನ್ಸ್‌ ಕಂಪೆನಿಯ ನೃತ್ಯಗಾರ್ತಿಯಾಗಿದ್ದಾರೆ. ಸದ್ಯಕ್ಕೆ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದಾರೆ.

ಜಮಾಲ್‌ ಅರಿ ಬ್ಲ್ಯಾಕ್‌

ಉತ್ತರ ಕರೋಲಿನಾದವರಾದ ಅವರು, ಉತ್ತರ ಕರೋಲಿನಾ ವಿಶ್ವವಿದ್ಯಾಲಯದಲ್ಲಿ ನೃತ್ಯ ಮತ್ತು ಕೊರಿಯೋಗ್ರಾಫಿ ವಿಷಯದಲ್ಲಿ ಬಿಎಫ್‌ಎ ಪದವಿ ಪಡೆದಿದ್ದಾರೆ. 2009ರಿಂದ ‘ದಕ್ಷಿಣಾ’ ಕಂಪೆನಿಯಲ್ಲಿ ಅವರು ನೃತ್ಯ ತಾಲೀಮು ನಡೆಸುತ್ತಿದ್ದಾರೆ.

ಹೆಲೆನ್‌ ಮೆರಿ ಕರ್ರೂತರ್ಸ್‌

ಇವರು ವಾಷಿಂಗ್ಟನ್‌ನವರು. ಹಲವು ನೃತ್ಯ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. 2013ರಿಂದ ದಕ್ಷಿಣಾ ಕಂಪನಿಯ ಸದಸ್ಯರಾಗಿದ್ದಾರೆ.

ಜುಲೆ ಡಿ ಗ್ರೆಗೋರಿಯಾ

ಉತ್ತರ ವಿರ್ಜಿನಿಯಾದವರು. ಜಾರ್ಜ್‌ ಮಾಸನ್‌ ವಿಶ್ವವಿದ್ಯಾಲಯದಲ್ಲಿ ನೃತ್ಯ ಕುರಿತು ಪದವಿ ಪಡೆದಿರುವ ಅವರು, ಆಸ್ಟ್ರೇಲಿಯನ್‌ ಮಾಡ್ರೆನ್‌ ಡಾನ್ಸ್‌ ಕಂಪೆನಿಯಲ್ಲೂ ತಾಲೀಮು ನಡೆಸಿದ್ದಾರೆ.

ಮಿಗ್ಯುಲ್‌ ಅಲ್ಕಂತರ

ನೃತ್ಯ ಮತ್ತು ಮನಃಶಾಸ್ತ್ರದಲ್ಲಿ ಬಿ.ಎ ಪದವೀಧರರಾದ ಅವರು ‘ದಕ್ಷಿಣಾ’ದಲ್ಲೂ ನೃತ್ಯಗಾರರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)