‘ರೈಸಿಂಗ್ ಕಾಶ್ಮೀರ್’ ಸಂಪಾದಕ ಶುಜಾತ್ ಬುಖಾರಿ ಮೇಲೆ ಗುಂಡಿನ ದಾಳಿ

7

‘ರೈಸಿಂಗ್ ಕಾಶ್ಮೀರ್’ ಸಂಪಾದಕ ಶುಜಾತ್ ಬುಖಾರಿ ಮೇಲೆ ಗುಂಡಿನ ದಾಳಿ

Published:
Updated:
‘ರೈಸಿಂಗ್ ಕಾಶ್ಮೀರ್’ ಸಂಪಾದಕ ಶುಜಾತ್ ಬುಖಾರಿ ಮೇಲೆ ಗುಂಡಿನ ದಾಳಿ

ಶ್ರೀನಗರ: ‘ರೈಸಿಂಗ್ ಕಾಶ್ಮೀರ್‌’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಮೇಲೆ ಭಯೋತ್ಪಾದಕರು ಗುರುವಾರ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡಿರುವ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

ಶ್ರೀನಗರದ ಪ್ರೆಸ್ ಕಾಲೊನಿಯಲ್ಲಿ ಶುಜಾತ್ ಬುಖಾರಿ ಅವರು ಇದ್ದ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ಮಳೆಗರೆದಿದ್ದಾರೆ.

ಕಾರು ಚಾಲಕ ಮತ್ತು ಖಾಸಗಿ ಭದ್ರತಾ ಸಿಬ್ಬಂದಿ ಸಹ ಈ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಮೂವರೂ ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು.

18 ವರ್ಷಗಳ ಹಿಂದೆ (2000ನೇ ಇಸವಿ) ಶುಜಾತ್ ಬುಖಾರಿ ಅವರ ಮೇಲೆ ದಾಳಿ ನಡೆದಿತ್ತು. ನಂತರ ಅವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry