ಪೊಲೀಸರಿಗೆ ಮಾಹಿತಿ ನೀಡಿದ ಪ್ರೊ.ನಾಯಕ್‌

7
ವಿಚಾರವಾದಿಯ ಬಗ್ಗೆ ಅಪರಿಚಿತನಿಂದ ವಿಚಾರಣೆ

ಪೊಲೀಸರಿಗೆ ಮಾಹಿತಿ ನೀಡಿದ ಪ್ರೊ.ನಾಯಕ್‌

Published:
Updated:

ಮಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ವಿಚಾರವಾದಿ ಪ್ರೊ.ನರೇಂದ್ರ ನಾಯಕ್‌ ಅವರು ವಾಸಿಸುವ ಮನೆಯ ಬಳಿ ಬಂದು, ಅವರ ಬಗ್ಗೆ ವಿಚಾರಿಸಿದ್ದ ಎನ್ನುವ ಮಾಹಿತಿ ತಿಳಿದು ಬಂದಿದ್ದು, ಪ್ರೊ.ನರೇಂದ್ರ ನಾಯಕ್ ಹತ್ಯೆಗೆ ಸಂಚು ರೂಪಿಸಲಾಗಿದೆಯೇ ಎನ್ನುವ ಸಂಶಯ ಕಾಡಲಾರಂಭಿಸಿದೆ.

ಇದೇ 12 ರಂದು ಆಗಂತುಕನೊಬ್ಬ ಪ್ರೊ.ನರೇಂದ್ರ ನಾಯಕ್ ಅವರು ವಾಸಿಸುವ ನಗರದ ಹ್ಯಾಟ್‌ಹಿಲ್‌ನಲ್ಲಿರುವ ನೋಯಲ್ ಪಾರ್ಕ್ ಫ್ಲಾಟ್‌ಗೆ ಬಂದಿದ್ದ ಎನ್ನಲಾಗಿದೆ.

ಅಗಂತುಕನ ನಡವಳಿಕೆ ಬಗ್ಗೆ ಪ್ಲ್ಯಾಟ್‌ನ ವಾಚ್‌ಮನ್‌ ಅನುಮಾನಗೊಂಡು ಮರು ಪ್ರಶ್ನೆ ಹಾಕಿದ. ಇದಕ್ಕೆ ಉತ್ತರಿಸಲಾಗದ ಅಲ್ಲಿಂದ ಪರಾರಿಯಾಗಿದ್ದಾನೆ. ಅಪಾರ್ಟ್‌ಮೆಂಟ್‌ನ ಸಿಸಿಟಿವಿಯಲ್ಲಿ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry