‘ಡಿಇಟಿ’ ಖರೀದಿ ಅಕ್ರಮ ತನಿಖೆಗೆ ಆಗ್ರಹ

7

‘ಡಿಇಟಿ’ ಖರೀದಿ ಅಕ್ರಮ ತನಿಖೆಗೆ ಆಗ್ರಹ

Published:
Updated:

ಬೆಂಗಳೂರು: ಉದ್ಯೋಗ ಹಾಗೂ ತರಬೇತಿ ಇಲಾಖೆಯು ಸರ್ಕಾರಿ ಹಾಗೂ ಅನುದಾನಿತ ಐಟಿಐಗಳಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿತರಿಸಿರುವ ಸೋಲಾರ್‌ ಲಾಟೀನು, ಕಂಪ್ಯೂಟರ್‌ ಟ್ಯಾಬ್‌ಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಎಸ್‌. ಬಸವರಾಜ್‌ ಎಂಬುವರು ಕಾರ್ಮಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ನೀಡಿರುವ ಟ್ಯಾಬ್‌ ಮತ್ತು ಸೋಲಾರ್‌ ಲಾಟೀನುಗಳನ್ನು ಉದ್ಯೋಗ ಹಾಗೂ ತರಬೇತಿ ಇಲಾಖೆಯೇ ನೇರವಾಗಿ ಖರೀದಿಸಲು ಅವಕಾಶವಿದ್ದರೂ, ಕಿಯೊನಿಕ್ಸ್‌ ಮುಖಾಂತರ ಪೂರೈಸಲಾಗಿದೆ. ಕಾಟಾಚಾರಕ್ಕೆ ದರ ಒಪ್ಪಂದ ಕುರಿತು ಮಾತುಕತೆ ನಡೆಸಲಾಗಿದೆ. ಆದರೆ, ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಹಣ ಪಾವತಿಸಿ ಇವುಗಳನ್ನು ಖರೀದಿ ಮಾಡಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಅಲ್ಲದೆ, ಡಿಜಿಟಲ್‌ ಪೋಡಿಯಂ ಹಾಗೂ ಸೋಲಾರ್‌ ದೀಪಗಳ ಖರೀದಿ ಮಾಡಿದ್ದು ಅದರಲ್ಲೂ ಅವ್ಯವಹಾರ ನಡೆದಿದೆ ಎಂದು ದೂರಲಾಗಿದೆ. ಕೆಲವು ಐಟಿಐಗಳ ಪ್ರಾಂಶುಪಾಲರು ಸೋಲಾರ್‌ ದೀಪಗಳು ಬೇಡವೆಂದು ಹೇಳಿದ್ದರೂ ಪೂರೈಸಲಾಗಿದೆ. ರಾಜ್ಯ ಸರ್ಕಾರ ಯಾವ ಉದ್ದೇಶಕ್ಕೆ ಉದ್ಯೋಗ ಹಾಗೂ ತರಬೇತಿ ಇಲಾಖೆಗೆ ಅನುದಾನ ನೀಡಿತ್ತೊ ಆ ಉದ್ದೇಶಕ್ಕೆ ಬಳಕೆ ಮಾಡದೆ ಅನುಪಯುಕ್ತ ಉದ್ದೇಶಗಳಿಗೆ ಖರ್ಚು ಮಾಡಲಾಗಿದೆ ಎಂದೂ ದೂರಿನಲ್ಲಿ ವಿವರಿಸಲಾಗಿದೆ.

ಈ ಖರೀದಿ ಅಕ್ರಮದಲ್ಲಿ ಅನೇಕ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಬಸವರಾಜು ಒತ್ತಾಯಿಸಿದ್ದಾರೆ. ಬಸವರಾಜು ಇದಕ್ಕೂ ಮೊದಲು ಲೋಕಾಯುಕ್ತರಿಗೆ ಈ ಅಕ್ರಮ ನಡೆದಿರುವ ಕುರಿತು ದೂರು ಸಲ್ಲಿಸಿದ್ದರು. ಆದರೆ, ಲೋಕಾಯುಕ್ತ ತನಿಖೆ ನಡೆಸಿ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಆದರೆ, ಸಿಎಜಿ ವರದಿಯು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಹಣ ಪಾವತಿಸಿ ಖರೀದಿ ಮಾಡಿದೆ ಎಂದು ಹೇಳಿರುವು

ದರಿಂದ ಪ್ರಕರಣಕ್ಕೆ ಮರುಜೀವ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry