₹15ಕ್ಕಾಗಿ ಜೋಡಿ ಕೊಲೆ!

7

₹15ಕ್ಕಾಗಿ ಜೋಡಿ ಕೊಲೆ!

Published:
Updated:

ಬೆಂಗಳೂರು: ಸಿಗರೇಟ್ ಖರೀದಿಸಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ ಇಬ್ಬರು ಸಹೋದರರ ಕೊಲೆ ನಡೆದ ಪ್ರಕರಣ ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಗೋವಿಂದಪುರದಲ್ಲಿ ಬುಧವಾರ ನಡೆದಿದೆ.

ಗೋವಿಂದಪುರ ಮುಖ್ಯರಸ್ತೆಯ ವೀರಣ್ಣಗಡ್ಡೆಯ ಅಮೀನ್(32) ಮತ್ತು ಮತೀನ್(30) ಕೊಲೆಯಾದ ಸಹೋದರರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿಯ ಮಾಲೀಕ ಅಲಿ ಮತ್ತು ವಸೀಂ ಹಾಗೂ ಪ್ರಶಾಂತ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬುಧವಾರ ರಾತ್ರಿ 8ರ ಸುಮಾರಿಗೆ ಅಮೀನ್ ರಸ್ತೆ ಬದಿಯಲ್ಲಿರುವ ಅಲಿ ಎಂಬುವರ ಅಂಗಡಿಯಲ್ಲಿ ಸಿಗರೇಟ್ ಖರೀದಿಸಿ, ಹಣ ನೀಡದೆ ಮರಳುತ್ತಿದ್ದ. ಆಗ ಅಲಿ ಆತನನ್ನು ತಡೆದು ಸಿಗರೇಟ್‌ನ ಹಣ ₹ 15 ಕೊಡಲು ಹೇಳಿದ್ದಾನೆ. ‘ನನ್ ಬಳಿ ಹಣವಿಲ್ಲ. ಮತ್ತೊಮ್ಮೆ ಕೊಡು

ತ್ತೇನೆ’ ಎಂದು ಅಮೀನ್‌ ಹೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿ, ಬಳಿಕ ಮಾರಾಮರಿ ನಡೆದಿದೆ. ಜಗಳ ನಡೆದ ವಿಚಾರವನ್ನು ಅಲಿ ಸ್ನೇಹಿತರಿಗೆ ತಿಳಿಸಿದ್ದಾನೆ.

ಮಾರಕಾಸ್ತ್ರಗಳನ್ನು ಹಿಡಿದು ಸ್ಥಳಕ್ಕೆ ಬಂದ ಅವರು ಅಮೀನ್ ಮೇಲೆ ಹಲ್ಲೆ ನಡೆಸಿದ್ದಾರೆ. ಇತ್ತ ವಿಷಯ ತಿಳಿದು ಅಮೀನ್ ಸಹೋದರ ಮತೀನ್ ಕೂಡ ಸ್ಥಳಕ್ಕೆ ಬಂದು ಜಗಳ ಬಿಡಿಸಲು ಮುಂದಾಗಿದ್ದಾನೆ. ಅವನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೋಡಿ ಕೊಲೆ ನಡೆದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry