ಕ್ಯಾಮೆರಾ ಕಣ್ಣಲ್ಲಿ ಮದ್ಯದ ಅಂಗಡಿ!

7
ಹೊಸ ಷರತ್ತು ವಿಧಿಸಿದ ಅಬಕಾರಿ ಇಲಾಖೆ

ಕ್ಯಾಮೆರಾ ಕಣ್ಣಲ್ಲಿ ಮದ್ಯದ ಅಂಗಡಿ!

Published:
Updated:
ಕ್ಯಾಮೆರಾ ಕಣ್ಣಲ್ಲಿ ಮದ್ಯದ ಅಂಗಡಿ!

ಬೆಂಗಳೂರು: ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ದರಗಳನ್ನು ಆಕರಿಸಿ, ಗ್ರಾಹಕರನ್ನು ಸುಲಿಗೆ ಮಾಡುತ್ತಿರುವ ಮದ್ಯ ಅಂಗಡಿಗಳ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ.

ರಾಜ್ಯದಲ್ಲಿರುವ ಎಲ್ಲ ಮದ್ಯದಂಗಡಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವುದನ್ನು ಕಡ್ಡಾಯಗೊಳಿಸಲು ಅಬಕಾರಿ ಇಲಾಖೆ ನಿರ್ಧರಿಸಿದೆ. ಪರವಾನಗಿ ನವೀಕರಿಸುವಾಗ ವಿಧಿಸುವ ವಿವಿಧ ಷರತ್ತುಗಳೊಂದಿಗೆ ರೀಟೇಲ್‌ ಮಳಿಗೆ ಮತ್ತು ಬಾರ್ ಹಾಗೂ ರೆಸ್ಟೋರೆಂಟ್‌ಗಳು ಸಿ.ಸಿ.ಟಿ.ವಿ ಹೊಂದಿರಬೇಕು ಎನ್ನುವ ಷರತ್ತನ್ನೂ ಇಲಾಖೆ ವಿಧಿಸಿದೆ.

ಶೇಕಡ 80ರಷ್ಟು ರೀಟೇಲ್ ಮಳಿಗೆಗಳೂ ಸೇರಿ ರಾಜ್ಯದಲ್ಲಿ ಸುಮಾರು 10 ಸಾವಿರ ಮದ್ಯದಂಗಡಿಗಳಿವೆ. ವಹಿವಾಟು ಮುಂದುವರಿಸಲು ಈ ತಿಂಗಳ ಅಂತ್ಯದೊಳಗೆ ಅವುಗಳ ಪರವಾನಗಿಯನ್ನು ನವೀಕರಿಸಬೇಕು. ಇದೇ 15ರಿಂದ ಈ ಪ್ರಕ್ರಿಯೆ ಆರಂಭವಾಗಲಿದೆ.

‘ಸಿ.ಟಿ.ಟಿ.ವಿ ಕ್ಯಾಮೆರಾ ಅಳವಡಿಸಿದರೆ ಮಾತ್ರ ಪರವಾನಗಿ ನವೀಕರಿಸಲಾಗುವುದು. ಅಂಗಡಿಗಳ ಮಾಲೀಕರು ಸಿ.ಸಿ.ಟಿ.ವಿ ವಿಡಿಯೊಗಳನ್ನು ಸಂಗ್ರಹಿಸಿಡಬೇಕು. ಅಗತ್ಯಬಿದ್ದಾಗ ಅದನ್ನು ಅಧಿಕಾರಿಗಳಿಗೆ ಸಲ್ಲಿಸಬೇಕು. ದೂರುಗಳು ಬಂದರೆ ವಿಡಿಯೊಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಅನುಕೂಲವಾಗುತ್ತದೆ’ ಎಂದು ಅಬಕಾರಿ ಇಲಾಖೆ ಕಮಿಷನರ್‌ ಮುನಿಷ್‌ ಮೌದ್ಗಿಲ್‌ ’ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚಿನ ದರ ಆಕರಿಸುವುದು ಮತ್ತು ಪರವಾನಗಿಯಲ್ಲಿ ನೀಡಿರುವ ಸಮಯಕ್ಕಿಂತಲೂ ಹೆಚ್ಚಿನ ಅವಧಿಯ ವರೆಗೆ ವಹಿವಾಟು ನಡೆಸುತ್ತಾರೆ ಎನ್ನವುದು ರಾಜ್ಯದಾದ್ಯಂತ ಮದ್ಯದಂಗಡಿಗಳ ವಿರುದ್ಧ ಬರುವ ಸಾಮಾನ್ಯ ದೂರುಗಳು. ಮದ್ಯ ಅಂಗಡಿಗಳು ನಕಲಿ ದರಪಟ್ಟಿ ಪ್ರದರ್ಶಿಸಿರುವ ನಿದರ್ಶನಗಳು ಸಾಕಷ್ಟಿವೆ. ರೀಟೇಲ್‌ ಉದ್ಯಮದಲ್ಲಿ ಇದು ಅತಿರೇಕವಾಗಿದೆ. ಹೀಗಿದ್ದರೂ ಸಾಕ್ಷ್ಯಗಳಿಲ್ಲದೆ ನಿಯಮ ಉಲ್ಲಂಘನೆ ಮಾಡುವ ಮದ್ಯದಂಗಡಿಗಳ ವಿರುದ್ಧ ಕ್ರಮಕೈಗೊಳ್ಳಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಅವರು.

ಸೆಕೆಂಡ್ಸ್‌ ಮಾರಾಟಕ್ಕೆ ಲಗಾಮು: ಸೆಕೆಂಡ್ಸ್‌ ಮದ್ಯ ಮಾರಾಟ ತಡೆಯಲು ಹಾಲೊಗ್ರಾಂ ಲೇಬಲ್‌ಗಳ ಬದಲು ‘ಕ್ಯೂಆರ್‌‘ ಕೋಡ್‌ ಅಳವಡಿಸಲು ಇಲಾಖೆ ನಿರ್ಧರಿಸಿದೆ. ಪ್ಯಾಕಿಂಗ್ ಮಾಡುವ ಸಂದರ್ಭದಲ್ಲೇ ಪ್ರತಿ ಬಾಟಲ್‌ಗಳ ಮೇಲೆ ಕ್ಯೂಆರ್‌ ಕೋಡ್‌ ಹಾಕಲಾಗುವುದು. ಇದು ಕೇವಲ ಸೆಕೆಂಡ್ಸ್‌ ಮದ್ಯದ ಹಾವಳಿ ತಡೆಯಲಷ್ಟೇ ಅಲ್ಲ, ಗ್ರಾಹಕರಿಗೆ ಗುಣಮಟ್ಟದ ಮದ್ಯ ಪೂರೈಕೆ ಮಾಡಲೂ ಇದರಿಂದ ಸಾಧ್ಯವಾಗಲಿದೆ’ ಎನ್ನುತ್ತಾರೆ ಮೌದ್ಗಿಲ್‌.

ಮದ್ಯದಗಂಡಿಗಳಲ್ಲಿ ಸಿ.ಟಿ.ಟಿ.ವಿ ಕ್ಯಾಮೆರಾ ಕಡ್ಡಾಯ

ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದರೆ ಮಾತ್ರ ಪರವಾನಗಿ ನವೀಕರಣ

ಮದ್ಯದ ಬಾಟಲ್‌ಗಳ ಮೇಲೆ ಕ್ಯೂಆರ್‌ ಕೋಡ್‌ ಬಳಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry