ರಕ್ತದಾನ ಮಾಡಿದ ಪೊಲೀಸರು

7

ರಕ್ತದಾನ ಮಾಡಿದ ಪೊಲೀಸರು

Published:
Updated:

ಬೆಂಗಳೂರು: ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್‌ಆರ್‌ಪಿ) ಕೋರಮಂಗಲದ 3ನೇ ಬೆಟಾಲಿಯನ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಪೊಲೀಸರು ಹಾಗೂ ಅವರ ಕುಟುಂಬದವರು ರಕ್ತದಾನ ಮಾಡಿದರು.

ನಾರಾಯಣ ಹೃದಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಬಿರವನ್ನು ರಕ್ತದಾನ ಮಾಡುವ ಮೂಲಕವೇ ಎಡಿಜಿಪಿ ಭಾಸ್ಕರ್‌ರಾವ್ ಉದ್ಘಾಟಿಸಿದರು. ಐಪಿಎಸ್‌ ಅಧಿಕಾರಿಗಳಾದ ತ್ಯಾಗರಾಜನ್, ಕುಲದೀಪ್‌ಕುಮಾರ್ ಜೈನ್‌ ಹಾಗೂ ನಿಶಾ ಜೇಮ್ಸ್‌ ಅವರು ಸಹ ರಕ್ತದಾನ ಮಾಡಿದರು. ಕೆಎಸ್‌ಆರ್‌ಪಿ ಸಿಬ್ಬಂದಿ ಹಾಗೂ ಅವರ ಕುಟುಂಬದವರೂ ಸೇರಿದಂತೆ 150ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry