ಶುಕ್ರವಾರ, ಜೂನ್ 18, 2021
24 °C
ಸಿಡುಕು ಸ್ವಭಾವ ಕಾಣಿಸಿಕೊಳ್ಳುವ ಸಾಧ್ಯತೆ

ಸ್ಮಾರ್ಟ್‌ಫೋನ್‌ ಬಳಕೆ: ಮಕ್ಕಳ ವರ್ತನೆ ಮೇಲೆ ಪರಿಣಾಮ

ಪಿಟಿಐ Updated:

ಅಕ್ಷರ ಗಾತ್ರ : | |

ಸ್ಮಾರ್ಟ್‌ಫೋನ್‌ ಬಳಕೆ: ಮಕ್ಕಳ ವರ್ತನೆ ಮೇಲೆ ಪರಿಣಾಮ

ವಾಷಿಂಗ್ಟನ್‌: ಕುಟುಂಬದೊಂದಿಗೆ ಇದ್ದಾಗ ಪೋಷಕರು ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಬಳಸುವುದರಿಂದ ಮಕ್ಕಳ ವರ್ತನೆ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

ಊಟ ಮಾಡುವಾಗ, ಆಟದ ವೇಳೆ ಹಾಗೂ ಮಲಗುವ ಸಂದರ್ಭದಲ್ಲಿ ಪೋಷಕರು ಹೆಚ್ಚಾಗಿ ಮೊಬೈಲ್‌ ಫೋನ್‌ ಬಳಸುವುದರಿಂದ ಮಕ್ಕಳಲ್ಲಿ ಆಶಾಭಂಗ ಅಥವಾ ನಿರಾಸೆ, ಗೊಣಗಾಟ ಮತ್ತು ಸಿಡುಕು ಕಾಣಿಸಿಕೊಳ್ಳುತ್ತದೆ ಎಂದು ಮಕ್ಕಳ ಸಂಶೋಧನಾ ಪತ್ರಿಕೆಯೊಂದು ವರದಿ ಮಾಡಿದೆ.

ಇದರಿಂದ ಮಕ್ಕಳ ವರ್ತನೆಯಲ್ಲಿ ಮಾತ್ರವಲ್ಲದೆ, ಪಾಲಕತ್ವದಲ್ಲಿಯೂ ವ್ಯತ್ಯಾಸ ಕಂಡುಬರುತ್ತದೆ ಎಂದು ವರದಿ ಹೇಳಿದೆ. ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಮುಂತಾದ ಆಧುನಿಕ ಸಾಧನಗಳನ್ನು ಬಳಸುವಾಗ ಪೋಷಕರು, ತಮ್ಮ ಮಕ್ಕಳೊಂದಿಗೆ ಹೆಚ್ಚು ಮಾತನಾಡುವುದಿಲ್ಲ. ಅಲ್ಲದೆ, ಈ ಸಂದರ್ಭದಲ್ಲಿ ಪೋಷಕರ ಗಮನ ಸೆಳೆಯಲು ಮಕ್ಕಳಿಗೆ ಕಷ್ಟವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಐದು ವರ್ಷದ ಮಕ್ಕಳನ್ನು ಹೊಂದಿರುವ 337 ಪೋಷಕರಿಗೆ ‍‍‍ಪಾಲಕತ್ವ ಮತ್ತು ಕೌಟುಂಬಿಕ ಸಂಬಂಧ ಕುರಿತಂತೆ ಆನ್‌ಲೈನ್‌ನಲ್ಲಿ ಪ್ರಶ್ನೆಗಳನ್ನು ಕಳಿಸಿ, ಅವರಿಂದ ಬಂದ ಉತ್ತರದ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು