ಹೊಸ ಸಹಕಾರ ನೀತಿ: ಸಚಿವ ಬಂಡೆಪ್ಪ ಕಾಶೆಂಪುರ

7

ಹೊಸ ಸಹಕಾರ ನೀತಿ: ಸಚಿವ ಬಂಡೆಪ್ಪ ಕಾಶೆಂಪುರ

Published:
Updated:
ಹೊಸ ಸಹಕಾರ ನೀತಿ: ಸಚಿವ ಬಂಡೆಪ್ಪ ಕಾಶೆಂಪುರ

ಬೀದರ್: ‘ಸಹಕಾರ ಕ್ಷೇತ್ರವನ್ನು ಇನ್ನಷ್ಟು  ಬಲಪಡಿಸುವ ದಿಸೆಯಲ್ಲಿ ಹೊಸ ಸಹಕಾರ ನೀತಿಯನ್ನು ರೂಪಿಸಲಾಗುವುದು’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು.

‘ಅನೇಕ ಕಾರಣಗಳಿಂದಾಗಿ ಸಹಕಾರ ಕ್ಷೇತ್ರದ ಸಕ್ಕರೆ ಕಾರ್ಖಾನೆಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಸಕ್ಕರೆ ಕಾರ್ಖಾನೆಗಳು ಲಾಭದಲ್ಲಿ ನಡೆಯುವಂತಾಗಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಹೊಸ ನೀತಿ ರೂಪಿಸಲಾಗುವುದು’ ಎಂದು ನಗರದ ತಮ್ಮ ನಿವಾಸದಲ್ಲಿ  ಶುಕ್ರವಾರ  ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ಮುಖ್ಯಮಂತ್ರಿ ಕುಮಾರಸ್ವಾಮಿ ನನ್ನ ಮೇಲೆ ವಿಶ್ವಾಸ ಇಟ್ಟು ಸಹಕಾರ ಖಾತೆ ಕೊಟ್ಟಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಇನ್ನುಳಿದ ವಿಷಯಗಳ ಬಗೆಗೆ ನಾನು ಮಾತನಾಡಲಾರೆ’ ಎಂದು ತಿಳಿಸಿದರು.

ಸಹಕಾರ ಖಾತೆಗೆ ಜಿ.ಟಿ.ದೇವೆಗೌಡರು ಪಟ್ಟು ಹಿಡಿದಿರುವ ಬಗೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry