ಕಪ್ಪು ಕುತ್ತಿಗೆ ಕೊಕ್ಕರೆಯ ಜೀವ ಉಳಿಸಿದ ಕಾರ್ಯಾಚರಣೆ

7
ನ್ಯಾಚುರಲ್‌ ಹಿಸ್ಟರಿ ಸೊಸೈಟಿ

ಕಪ್ಪು ಕುತ್ತಿಗೆ ಕೊಕ್ಕರೆಯ ಜೀವ ಉಳಿಸಿದ ಕಾರ್ಯಾಚರಣೆ

Published:
Updated:
ಕಪ್ಪು ಕುತ್ತಿಗೆ ಕೊಕ್ಕರೆಯ ಜೀವ ಉಳಿಸಿದ ಕಾರ್ಯಾಚರಣೆ

ಚಂಡಿಗಡ: ಕಪ್ಪು ಕುತ್ತಿಗೆಯ ಕೊಕ್ಕರೆಯು ಸಾವನ್ನಪ್ಪುವ ಹಂತಕ್ಕೆ ತಲುಪಿದ್ದು ಅದನ್ನು ರಕ್ಷಿಸಲು ಹರಿಯಾಣದ ಬಸೈ ವೆಟ್‌ಲ್ಯಾಂಡ್‌ನಲ್ಲಿ ಬೃಹತ್‌ ಕಾರ್ಯಾಚರಣೆ ಕೈಗೊಂಡಿದ್ದು. ಕೊಕ್ಕರೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

6 ದಿನಗಳ ಪರಿಶ್ರಮದಿಂದ ಸಾವನ್ನಪ್ಪುತ್ತಿದ್ದ ಕೊಕ್ಕರೆಯನ್ನು ಹಿಡಿದು ಬುಧವಾರ ಹರಿಯಾಣದಲ್ಲಿ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಕಪ್ಪು ಕುತ್ತಿಗೆ ಕೊಕ್ಕರೆ ಸಾವಿಗೆ ಪ್ಲಾಸ್ಟಿಕ್‌ ಕಾರಣ ಎಂದು ಬೃಹತ್‌ ಕಾರ್ಯಾಚರಣೆಯಲ್ಲಿ ತಿಳಿದು ಬಂದಿದೆ. ಕೊಕ್ಕರೆಯು ಆಹಾರ ಸೇವನೆಯ ಜೊತೆ ಪ್ಲಾಸ್ಟಿಕ್‌ ಸೇವಿಸಿ ಕುತ್ತಿಗೆಯ ಸುತ್ತಾ ಪ್ಲಾಸ್ಟಿಕ್‌ ಆವರಿಸಿಕೊಂಡು ಬಾಯಿ ತೆರೆದು ನೀರು, ಆಹಾರ ಸೇವನೆ ಮಾಡಲಾಗದೆ ಸಾವನ್ನಪ್ಪುತ್ತಿದೆ ಎಂದು ತಿಳಿದು ಬಂದಿದೆ.

ಕೊಕ್ಕರೆಯನ್ನು ರಕ್ಷಣೆಗೆ ಹರಿಯಾಣದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು. ಅರಣ್ಯದಲ್ಲಿ ಬೃಹತ್‌ ಪಕ್ಷಿಗಳ ರಕ್ಷಣೆಗೆಂದು ಡ್ರೋನ್‌ಗಳನ್ನು ಅಳವಡಿಸಿದ್ದು. ಅದರ ಸಹಾಯದಿಂದ ಕಪ್ಪು ಕುತ್ತಿಗೆಯ ಕೊಕ್ಕರೆಯನ್ನು ರಕ್ಷಿಸಿದ್ದೇವೆ ಎಂದು ಹೆಚ್ಚುವರಿ ಮುಖ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದರು.

ಕೊಕ್ಕರೆ ಸಿಕ್ಕ ತಕ್ಷಣ ನಿರ್ಜಲೀಕರಣ ಸಮಸ್ಯೆಯನ್ನು ಪರಿಹರಿಸಿ ನಂತರ ಪಶುವೈದ್ಯರಿಗೆ ಒಪ್ಪಿಸಲಾಯಿತು. ಪಕ್ಷಿಗಳ ರಕ್ಷಣೆಗಾಗಿ ಹರಿಯಾಣದಲ್ಲಿ ಪರಿಣಿತ ತಂಡವೊಂದು ಕಾಯುತ್ತಿದೆ ಎಂದು ಕುಮಾರ್‌ ಹೇಳಿದ್ದಾರೆ.

ಹಸಿವು, ದನಿವಿನಿಂದ ಕೆಂಗೆಟ್ಟ ಪಕ್ಷಿಗಳ ಆಹಾರ ಸೇವನೆ ಜೊತೆಗೆ ಪ್ಲಾಸ್ಟಿಕ್‌ ಸೇವಿಸಿ ಸಾವನ್ನಪ್ಪುತ್ತಿದ್ದಾವೆ. ಇವುಗಳನ್ನು ರಕ್ಷಿಸಲು ಇದೊಂದು ಒಳ್ಳೆಯ ಕಾರ್ಯವಾಗಿದೆ.

ಅರಣ್ಯದಲ್ಲಿ ಪಕ್ಷಿಗಳನ್ನು ರಕ್ಷಿಸಲು ಮಂಗಳವಾರ ಡ್ರೋನ್‌ಗಳನ್ನು ಅಳವಡಿಸಲಾಗಿದೆ. ಡ್ರೋನ್‌ ಹಾರಾಟದಲ್ಲಿ ವಿದ್ಯುತ್‌ ತಂತಿಗಳು ತಗಲುತ್ತವೆ ಎಂದು ನೆಲಸಮಮಾಡಲಾಗಿದೆ.

ಈ ಕಾರ್ಯಾಚರಣೆಯ ಎಚ್ಚೆತ್ತ ತಂಡವು ಹರಿಯಾಣದ ಅರಣ್ಯದ ಸುತ್ತಮುತ್ತಲಿನಲ್ಲಿ ಪ್ಲಾಸ್ಟಿಕ್‌ ಅವರಿಸಿದೆ ಅದನ್ನು ಅಲ್ಲಿಂದ ವಿಲೇವಾರಿ ಮಾಡಲು ವಾಯು ಮಾಲಿನ್ಯ ನಿಯಂತ್ರಣ ಮಂಡಲಿಗೆ ತಜ್ಞರು ತಿಳಿಸಿದ್ದಾರೆ.

ಹರಿಯಾಣ ಒಂದು ಬೃಹತ್‌ ಪಕ್ಷಿಯ ಜೀವ ಉಳಿಸಲು ನ್ಯಾಚುರಲ್‌ ಹಿಸ್ಟರಿ ಸೊಸೈಟಿಯ ಪರಿಶ್ರಮ ಪಟ್ಟು ಪಕ್ಷಿ ಜೀವವನ್ನು ಉಳಿಸಲು ಯಶಸ್ವಿಯಾಗಿದೆ.

––

ಆಧುನೀಕರಣದ ಭರಾಟೆಯಲ್ಲಿ ಪಕ್ಷಿ ಸಂಕುಲವೇ ಅಳಿವಿನಂಚಿನಲ್ಲಿವೆ. ಕೆಲವೊಂದು ಹಲವು ಈಗಾಗಲೇ ಸಂಪೂರ್ಣವಾಗಿ ಕಣ್ಮರೆಯಾಗಿದ್ದು ಆ ಪಕ್ಷಿಗಳನ್ನು ಪೋಟೋದಲ್ಲಿ ನೋಡುವ ಸ್ಥಿತಿ ಒದಗಿ ಬಂದಿದೆ. 2012ರಲ್ಲಿ ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟವು ಬಿಳಿ ಗರಿಯಂಚಿನ ಹದ್ದು, ಭಾರತೀಯ ಹದ್ದು, ಕೆಂಪು ತಲೆಯ ಹದ್ದು, ಕೆಂಪು ತಲೆಯ ಬಾತುಕೋಳಿ, ಬಿಳಿ ಕ್ರೌಂಚ, ಟಿಟ್ಟಿಭ, ಸೈಬೀರಿಯಾ ಹಂಸ, ಕಾಡಿನ ಗೂಬೆ ಸಹಿತ 14 ಹಕ್ಕಿ ಸಂತತಿಯ ಪಕ್ಷಿಗಳು ಅಳವಿನಂಚಿನಲ್ಲಿದೆ ಎಂದು ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry