6

ಸಂಪಾದಕ ಶುಜಾತ್‌ ಬುಖಾರಿ ಅಂತ್ಯಕ್ರಿಯೆ; ಕಣ್ಣೀರ ವಿದಾಯ

Published:
Updated:
ಸಂಪಾದಕ ಶುಜಾತ್‌ ಬುಖಾರಿ ಅಂತ್ಯಕ್ರಿಯೆ; ಕಣ್ಣೀರ ವಿದಾಯ

ಶ್ರೀನಗರ: ಅಪರಿಚಿತ ಬಂದೂಕುಧಾರಿಯಿಂದ ಹತ್ಯೆಗೊಳಗಾದ ಖ್ಯಾತ ಪತ್ರಕರ್ತ ಮತ್ತು ‘ರೈಸಿಂಗ್ ಕಾಶ್ಮೀರ್‌’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಅವರ ಅಂತ್ಯಕ್ರಿಯೆ ಶುಕ್ರವಾರ ನೆರವೇರಿತು.

ಅಂತ್ಯಕ್ರಿಯೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ಕುಡುಂಬಸ್ಥರು, ಕಾಶ್ಮೀರದ ನೂರಾರು ಜನಾ ಪಾಲ್ಗೊಂಡು, ದುಃಖಿತರಾಗಿ, ಕಣ್ಣಿರ ವಿದಾಯ ಹೇಳಿದರು.

ಬಾರಾಮುಲ್ಲಾ ಜಿಲ್ಲೆಯ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು. ಮಳೆಯ ಮಧ್ಯೆಯೂ ಸಹೋದ್ಯೋಗಿಗಳು, ಸ್ನೇಹಿತರು, ಗ್ರಾಮಸ್ಥರು ಮೆರವಣಿಗೆಯಲ್ಲಿ ತೆರಳಿದರು. ಈ ವೇಳೆ ಗ್ರಾಮದ ರಸ್ತೆ ಜನರಿಂದ ತುಂಬಿದ್ದರಿಂದ ಬೇರಾವುದೇ ವಾಹನ ಸಂಚಾರಕ್ಕೆ ಅವಕಾಶ ಇಲ್ಲದಂತಾಗಿತ್ತು.

ನ್ಯಾಷನಲ್‌ ಕಾನ್ಫರೆನ್ಸ್‌ನ ನಾಯಕ ಓಮರ್‌ ಅಬ್ದುಲ್ಲಾ ಅವರು ಶುಜಾತ್‌ ಬುಖಾರಿ ಅವರ ಬಾರಾಮುಲ್ಲಾದಲ್ಲಿನ ನೀವಾಸಕ್ಕೆ ಭೇಟಿ ನೀಡಿದ್ದರು.

ಗುರುವಾರ ಗುಂಡಿಟ್ಟು ಹತ್ಯೆ ಮಾಡಿರುವ ಸಂಬಂಧ ದಾಳಿಯಲ್ಲಿ ಭಾಗಿಯಾಗಿದ್ದವರ ಪತ್ತೆಗೆ ಪೊಲೀಸರು ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಇಲ್ಲಿನ ಪ್ರೆಸ್‌ ಕಾಲೊನಿಯಲ್ಲಿ ಶುಜಾತ್‌ ಬುಖಾರಿ ಅವರ ಹತ್ಯೆ ವೇಳೆ ಅವರ ಖಾಸಗಿ ಭದ್ರತಾ ಅಧಿಕಾರಿಯೂ ಗುಂಡೇಟಿಗೆ ಬಲಿಯಾಗಿದ್ದಾರೆ.

ಜಮ್ಮುವಿನಲ್ಲಿ ಪ್ರಸ್‌ಕ್ಲಬ್‌ ಸದಸ್ಯರು ಶುಜಾತ್‌ ಬುಖಾರಿ ಅವರಿಗೆ ಸಂತಾಪ ಸೂಚಿಸಿದರು.

* ಇದನ್ನೂ ಓದಿ...

ಸಂಪಾದಕ ಬುಖಾರಿ ಹತ್ಯೆ: ಸಿ.ಸಿ ಟಿ.ವಿಯಲ್ಲಿ ಸೆರೆಯಾದ ಶಂಕಿತರ ಚಿತ್ರ ಬಿಡುಗಡೆ

‘ರೈಸಿಂಗ್ ಕಾಶ್ಮೀರ್‌’ ಸಂಪಾದಕ ಬುಖಾರಿ ಹತ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry