ಆರ್‌.ಅಶ್ವಿನ್‌ ಸ್ಪಿನ್‌ ದಾಳಿಗೆ ಅಫ್ಗನ್‌ ತತ್ತರ: ಮೊದಲ ಇನಿಂಗ್ಸ್‌ 109 ರನ್‌ಗೆ ಆಲೌಟ್‌

7

ಆರ್‌.ಅಶ್ವಿನ್‌ ಸ್ಪಿನ್‌ ದಾಳಿಗೆ ಅಫ್ಗನ್‌ ತತ್ತರ: ಮೊದಲ ಇನಿಂಗ್ಸ್‌ 109 ರನ್‌ಗೆ ಆಲೌಟ್‌

Published:
Updated:
ಆರ್‌.ಅಶ್ವಿನ್‌ ಸ್ಪಿನ್‌ ದಾಳಿಗೆ ಅಫ್ಗನ್‌ ತತ್ತರ: ಮೊದಲ ಇನಿಂಗ್ಸ್‌ 109 ರನ್‌ಗೆ ಆಲೌಟ್‌

ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಅಫ್ಗನಿಸ್ತಾನ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ಶುಕ್ರವಾರ ಎರಡನೇ ದಿನದಾಟ ಆರಂಭಿಸಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ 104.5 ಓವರ್‌ಗಳಲ್ಲಿ 474 ರನ್‌ ಗಳಿಸಿ ಆಲೌಟ್‌ ಆಯಿತು. 478 ರನ್‌ ಗುರಿ ಬೆನ್ನತ್ತಿದ ಅಫ್ಗನ್‌ 27.5 ಓವರ್‌ಗಳಲ್ಲಿ 109 ರನ್‌ ಗಳಿಸಿ ಆಲೌಟ್‌ ಆಗಿದೆ.

ಭಾರತದ ಪರ: ಆರ್‌.ಅಶ್ವಿನ್‌ 4, ಇಶಾಂತ್‌ ಶರ್ಮಾ 2, ರವೀಂದ್ರ ಜಡೇಜ 2, ಉಮೇಶ್‌ ಯಾದವ್‌ 1 ವಿಕೆಟ್‌ ಕಬಳಿಸಿದರು. ಸದ್ಯ ಅಫ್ಗನ್‌ ಎರಡನೇ ಇನಿಂಗ್ಸ್‌ ಆರಂಭಿಸಿದೆ.‌

ಗುರುವಾರ ಅಫ್ಗನ್‌ ವಿರುದ್ಧ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಮೊದಲ ದಿನದಾಟದ ಅಂತ್ಯಕ್ಕೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಶಿಖರ್ ಧವನ್ (107; 96ಎ, 19ಬೌಂ, 3ಸಿ) ಮತ್ತು ಮುರಳಿ ವಿಜಯ್ (105; 153ಎ, 15ಬೌಂ, 1ಸಿ) ಅವರ ಅಮೋಘ ಶತಕಗಳ ಉತ್ತಮ ಆರಂಭ ದೊರೆಯಿತು. ಊಟಕ್ಕೂ ಮುನ್ನದ ಅವಧಿಯಲ್ಲಿ ಶತಕ ಹೊಡೆದ ಭಾರತದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಶಿಖರ್ ಪಾತ್ರರಾದರು.

ಆತಿಥೇಯ ತಂಡವು ದಿನದಾಟದ ಕೊನೆಗೆ 78 ಓವರ್‌ಗಳಲ್ಲಿ  6 ವಿಕೆಟ್‌ಗಳ ನಷ್ಟಕ್ಕೆ 347 ರನ್‌ಗಳನ್ನು ಗಳಿಸಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !