7
ಎಚ್‌ಪಿಎಲ್‌ ಕ್ರಿಕೆಟ್‌: ಚಿರಾಗ್‌, ಕೈಫ್‌ ಮುಲ್ಲಾಗೆ ತಲಾ ನಾಲ್ಕು ವಿಕೆಟ್‌

ರೋಹನ ಮಿಂಚು: ವಾರಿಯರ್ಸ್‌ಗೆ ಜಯ

Published:
Updated:

ಹುಬ್ಬಳ್ಳಿ: ಧಾರವಾಡದ ಡ್ರಾಪಿನ್‌ ವಾರಿಯರ್ಸ್ ಮತ್ತು ಎನ್‌.ಕೆ. ವಾರಿಯರ್ಸ್ ತಂಡಗಳು ಜೂನಿಯರ್‌ ಎಚ್‌ಪಿಎಲ್‌ ಕ್ರಿಕೆಟ್‌ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಗೆಲುವು ಪಡೆದಿವೆ.

ರಾಜನಗರದಲ್ಲಿರುವ ಕೆ.ಎಸ್‌.ಸಿ.ಎ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಎನ್‌.ಕೆ. ವಾರಿಯರ್ಸ್ 30 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 175 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿತು. ಎದುರಾಳಿ ಬೆಳಗಾವಿಯ ಬಿಜಾಪುರ ಬುಲ್ಸ್‌ ಸಿಸಿಐ ತಂಡ 27.4 ಓವರ್‌ಗಳಲ್ಲಿ 120 ರನ್‌ ಗಳಿಸಿ ಆಲೌಟ್‌ ಆಯಿತು. ಎನ್‌.ಕೆ. ತಂಡದ ರೋಹನ ಯರೇಸೀಮಿ 92 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸೇರಿದಂತೆ 89 ರನ್‌ ಗಳಿಸಿದರು. ಬೌಲಿಂಗ್‌ನಲ್ಲಿಯೂ ಮಿಂಚಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಗದಗನ ವಾಲ್ಮೀಕಿ ಸ್ಟ್ರೈಕರ್ಸ್ ತಂಡದ ಎದುರು ಡ್ರಾಪಿನ್‌ ವಾರಿಯರ್ಸ್‌ ಮೂರು ವಿಕೆಟ್‌ಗಳ ಜಯ ಸಾಧಿಸಿತು. ಡ್ರಾಪಿನ್‌ ತಂಡದ ಸುದೀಪ ಸತೇರಿ (45) ಹಾಗೂ ಆಕಾಶ ಅಸಲಕರ (ಅಜೇಯ 27) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಕ್ಕೂ ಮೊದಲು ಚಿರಾಗ್‌ ನಾಯಕ್‌ ಹಾಗೂ ಮೊಹಮ್ಮದ್‌ ಕೈಫ್‌ ಮುಲ್ಲಾ ತಲಾ ನಾಲ್ಕು ವಿಕೆಟ್ ಕಬಳಿಸಿದರು.

ಶುಕ್ರವಾರ ನಡೆಯುವ ಪಂದ್ಯಗಳಲ್ಲಿ ಸ್ಮಾರ್ಟ್‌ ವಿಷನ್‌–ಎನ್‌.ಕೆ. ವಾರಿಯರ್ಸ್‌ (ಬೆ. 8ಕ್ಕೆ) ಹಾಗೂ ವಾಲ್ಮೀಕಿ ಸ್ಟ್ರೈಕರ್ಸ್‌–ಬಿಜಾಪುರ ಬುಲ್ಸ್‌ ತಂಡಗಳು (ಮ. 1.15) ಪೈಪೋಟಿ ನಡೆಸಲಿವೆ.

ಸಂಕ್ಷಿಪ್ತ ಸ್ಕೋರು: ಎನ್‌.ಕೆ. ವಾರಿಯರ್ಸ್‌ 30 ಓವರ್‌ಗಳಲ್ಲಿ 8ಕ್ಕೆ175 (ರೋಹನ ಯರೇಸೀಮಿ 89, ಧ್ರುವ ನಾಯ್ಕ 43, ಮಾಧವ ಧಾರವಾಡಕರ 13; ಎಂ.ಎಸ್. ಮನೀಷ 33ಕ್ಕೆ3), ಬಿಜಾಪುರ ಬುಲ್ಸ್‌ 27.4 ಓವರ್‌ಗಳಲ್ಲಿ 120 (ರಿಷಿಕೇಶ ರಜಪೂತ್‌ 30, ರೋಹಿತ್‌ ಆರ್. ಪಾಟೀಲ 29, ಆರ್ಯನ್‌ ಶರ್ಮಾ 19; ರೋಹನ ಯರೇಸೀಮಿ 17ಕ್ಕೆ3, ಅಬ್ದುಲ್‌ ಕರೀಮ್‌ ದಿವಾನ್‌ ಅಲಿ 23ಕ್ಕೆ3, ಅನೀಶ ಭೂಸದ 23ಕ್ಕೆ2). ಫಲಿತಾಂಶ: ಎನ್‌.ಕೆ. ವಾರಿಯರ್ಸ್‌ ತಂಡಕ್ಕೆ 55 ರನ್‌ ಗೆಲುವು.

ವಾಲ್ಮೀಕಿ ಸ್ಟ್ರೈಕರ್ಸ್‌ 28.3 ಓವರ್‌ಗಳಲ್ಲಿ 105 (ತೇಜಸ್ ಮುರ್ಡೇಶ್ವರ 37, ಮ್ಯಾಥ್ಯೂ ನಿಲೂಗಲ್‌ 17; ಚಿರಾಗ್‌ ನಾಯಕ 24ಕ್ಕೆ4, ಮೊಹಮ್ಮದ್ ಕೈಫ್‌ ಮುಲ್ಲಾ 13ಕ್ಕೆ4). ಡ್ರಾಪಿನ್‌ ವಾರಿಯರ್ಸ್‌ 27.1 ಓವರ್‌ಗಳಲ್ಲಿ 7ಕ್ಕೆ107 (ಸುದೀಪ ಸತೇರಿ 45, ಆಕಾಶ ಅಸಲಕರ ಅಜೇಯ 27; ಅಕ್ಷಯ ಬಗಾಡಿ 8ಕ್ಕೆ2, ಮೊಹಮ್ಮದ್‌ ರೆಹಾನ್‌ ಕಿತ್ತೂರ 18ಕ್ಕೆ2).

ಫಲಿತಾಂಶ: ಡ್ರಾಪಿನ್‌ ತಂಡಕ್ಕೆ 3 ವಿಕೆಟ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry