7
ಕಾರವಾರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಬಾಯಿ ಕ್ಯಾನ್ಸರ್‌ ತಿಳಿಯಲು ತಂತ್ರಾಂಶ!

Published:
Updated:

ಕಾರವಾರ: ಇನ್ಮುಂದೆ ಬಾಯಿಯ ಕ್ಯಾನ್ಸರ್‌ನ ಕುರಿತು ಪರೀಕ್ಷೆ ಮಾಡಿಸಿ ಕೊಳ್ಳುವುದು ತುಂಬ ಸುಲಭ! ಕೇವಲ ಬಾಯಿಯ ಒಳಭಾಗದ ಫೊಟೊ ಇದ್ದರೆ ಸಾಕು, ಕ್ಯಾನ್ಸರ್ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಇಂಥದ್ದೊಂದು ಸರಳ ತಂತ್ರಾಂಶವನ್ನು ತಾಲ್ಲೂಕಿನ ಮಾಜಾಳಿಯ ಸರ್ಕಾರಿ ಎಂಜಿನಿಯ ರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ.

‘ಹೆಚ್ಚು ಗುಟ್ಕಾ ಜಗಿಯುವ, ಜರ್ದಾ, ಪಾನ್ ಮಸಾಲಗಳನ್ನು ತಿನ್ನುವವರಿಗೆ ಬಾಯಿ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇರುತ್ತದೆ. ಅಂಥವರ ಬಾಯಿಯಲ್ಲಿ ಸಣ್ಣ ಗುಳ್ಳೆ ಆದರೂ ಅದನ್ನು ಕ್ಯಾನ್ಸರ್ ಎಂದು ಬಿಂಬಿಸುವ ಕೆಲವು ಪ್ರಸಂಗಗಳು ನಡೆದಿವೆ. ಹೀಗಾಗಿ ಬಾಯಿಯಲ್ಲಿ ಎದ್ದಿರುವುದು ಕ್ಯಾನ್ಸರ್‌ ಗುಳ್ಳೆಯೇ ಎಂಬುದನ್ನು ಪ್ರಾಥಮಿಕ ವರದಿಯ ಮೂಲಕವೇ ಖಚಿತಪಡಿಸಿಕೊಳ್ಳಲು ತಂತ್ರಾಂಶ ಸಿದ್ಧಪಡಿಸಲಾಗಿದೆ’ ಎನ್ನುತ್ತಾರೆ ತಂತ್ರಾಂಶ ಸಿದ್ಧಪಡಿಸಿದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಭರಮಾ ಗೌಡ.

ತಂತ್ರಾಂಶಕ್ಕೆ ವಿದ್ಯಾರ್ಥಿ ಗಳು  ‘ವಿನ್ಯಾಸ ವಿಶ್ಲೇಷಣೆ ಆಧಾರಿತ ವಿಭಾಗೀಕರಣ ಮತ್ತು ಕೃತಕ ನರಮಂಡಲ ಬಳಸಿ ಬಣ್ಣದ ಚಿತ್ರಗಳಲ್ಲಿ ಬಾಯಿಯ ಕ್ಯಾನ್ಸರ್ ಗಾಯಗಳ ವರ್ಗೀಕರಣ’ ಎಂದು ಹೆಸರಿಸಿದ್ದಾರೆ. ತಂತ್ರಾಂಶವನ್ನು ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಭರಮಾ ಗೌಡ, ಮಂಜುನಾಥ, ವಿಶ್ವನಾಥ ಹಾಗೂ ಶರಣಯ್ಯ ಸಿದ್ಧಪಡಿಸಿದ್ದಾರೆ.

ಶೇ 80ರಷ್ಟು ಖಚಿತ ಫಲಿತಾಂಶ: ‘ಈ ತಂತ್ರಾಂಶದ ಮೂಲಕ ಶೇ 80ರಷ್ಟು ಸ್ಪಷ್ಟ ವರದಿ ಪಡೆದುಕೊಳ್ಳಬಹುದು. ಕೇವಲ 10ರಿಂದ 15 ಸೆಕೆಂಡ್‌ಗಳಲ್ಲಿ ವರದಿ ಸಿಗುತ್ತದೆ’ ಎನ್ನುತ್ತಾರೆ ಶರಣಯ್ಯ.

ಹೇಗೆ ಕೆಲಸ ಮಾಡುತ್ತದೆ?: ‘ಬಾಯಿ ಯಲ್ಲಿ ಗುಳ್ಳೆ ಅಥವಾ ಕ್ಯಾನ್ಸರ್‌ನ ಲಕ್ಷಣ ಗಳನ್ನು ಹೋಲುವಂಥ ಯಾವುದೇ ಮಾರ್ಪಾಡು ಆಗಿದ್ದಲ್ಲಿ ಅದರ ಫೊಟೊ ತೆಗೆಯಬೇಕು. ಅದನ್ನು ಕಂಪ್ಯೂಟರ್‌ನಲ್ಲಿರುವ ‘ಮ್ಯಾಟ್‌ಲ್ಯಾಬ್– 2014’ ಎನ್ನುವ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಇಲ್ಲಿ ಆ ಫೊಟೊ ವಿವಿಧ ವಿಭಾಗಗಳಲ್ಲಿ ಕ್ಷಣಾರ್ಧದಲ್ಲಿ ಸ್ವಯಂಚಾಲಿತವಾಗಿ ವಿಶ್ಲೇಷಣೆ ಗೊಳ್ಳುತ್ತದೆ. ಝೆರಾಕ್ಸ್‌ ಪ್ರತಿಯಂಥ ಫೊಟೊವೊಂದು ಅಂತಿಮವಾಗಿ ಲಭ್ಯವಾಗುತ್ತದೆ. ಇದರಿಂದ ಕ್ಯಾನ್ಸರ್ ಅನ್ನು ದೃಢೀಕರಿಸಿಕೊಳ್ಳಬಹುದು’ ಎಂದು ವಿವರಿಸಿದರು.

 ಮಾಹಿತಿ ಪೂರೈಕೆ: ‘ಈ ತಂತ್ರಾಂಶಕ್ಕೆ ಎಲ್ಲ ಮಾಹಿತಿಗಳನ್ನು ಮೊದಲೇ ಒದಗಿಸಲಾಗಿರುತ್ತದೆ. ಬಾಯಿ ಕ್ಯಾನ್ಸರ್‌ನಲ್ಲಿಯೂ ವಿಧ ಗಳಿವೆ. ಅವು ಹೇಗೆ ಉಂಟಾ ಗುತ್ತವೆ? ಲಕ್ಷಣಗಳೇನು? ಹೀಗೆ ಮಾಹಿತಿಯು ತಂತ್ರಾಂಶದಲ್ಲಿರುತ್ತದೆ’ ಎನ್ನುತ್ತಾರೆ ವಿಶ್ವನಾಥ.

ದೇವರಾಜ ನಾಯ್ಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry