ಸೋಮವಾರ, ಜುಲೈ 4, 2022
22 °C

ಮಳೆಗಾಲದಲ್ಲಿ ಹೀಗಿರಲಿ ನಿಮ್ಮ ಮೇಕಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆಗಾಲದಲ್ಲಿ ಹೀಗಿರಲಿ ನಿಮ್ಮ ಮೇಕಪ್

ನಿತ್ಯವೂ ಚೆಂದಾಗಿ ಅಲಂಕರಿಸಿಕೊಂಡು ಹೋಗುವ ಹೆಂಗಳೆಯರಿಗೆ ಮಳೆಗಾಲ ಬಂತೆಂದರೆ ಸಾಕು ಬೇಸರವಾಗೋದು ಸಹಜ. ಎಷ್ಟೇ ಚೆನ್ನಾಗಿ ಮೇಕಪ್ ಮಾಡಿಕೊಂಡಿದ್ದರೂ ಮಳೆ ಬಂದರೆ ಸಾಕು ಅದೆಲ್ಲಾ ಹಾಳಾಗಿಹೋಗುತ್ತದೆಂಬ ಚಿಂತೆ ಅವರದು. ತುಸು ಕಾಳಜಿ ವಹಿಸಿದರೆ ಮಳೆಗಾಲದಲ್ಲಿ ಮೇಕಪ್ ಹಾಳಾಗದಂತೆ ಉಳಿಸಿಕೊಳ್ಳಬಹುದು.

ಅದು ಹೇಗೆ ಅಂತೀರಾ? ಮಳೆಗಾಲದಲ್ಲಿ ಮೇಕಪ್ ಹಾಳಾಗದಂತೆ ಕಾಪಾಡಿಕೊಳ್ಳಲು ಇಲ್ಲಿವೆ ಕೆಲ ಟಿಪ್ಸ್‌ಗಳು

ವಾಟರ್‌ಪ್ರೂಫ್ ಮೇಕಪ್: ಈಗಂತೂ ಫೌಂಡೇಷನ್, ಕಾಜಲ್, ಮಸ್ಕರಾ, ಐಲೈನರ್ ಎಲ್ಲವೂ ವಾಟರ್‌ಪ್ರೂಫ್ ಬಂದಿವೆ. ಮಳೆಗಾಲದಲ್ಲಿ ವಾಟರ್‌ಪ್ರೂಫ್ ಸೌಂದರ್ಯ ಉತ್ಪನ್ನಗಳನ್ನೇ ಬಳಸಿ. ಇದರಿಂದ ಮಳೆಯಲ್ಲಿ ನೆನೆದರೂ ನಿಮ್ಮ ಮೇಕಪ್ ಕರಗದು. ಇಲ್ಲವೇ ಮುಖ ಬಣ್ಣಗೆಡದು.

ಮಳೆಗಾಲದಲ್ಲಿ ವಾಟರ್‌ಪ್ರೂಫ್ ಕಾಜಲ್, ಮಸ್ಕರಾ, ಐಲೈನರ್ ಬಳಸುವುದು ಕ್ಷೇಮ. ಮಳೆ ಹನಿಗಳು ಅಥವಾ ನೀರು ಬಿದ್ದರೂ ನಿಮ್ಮ ಕಣ್ಣಿನಿಂದ ಕಾಡಿಗೆ ಜಾರದು. ಸ್ವಲ್ಪ ಟಚ್‌ಅಪ್ ಮಾಡಿಕೊಂಡರೆ ನಿಮ್ಮ ಮೇಕಪ್ ಮುಂಚೆನಂತೆಯೇ ಕಂಗೊಳಿಸುತ್ತದೆ.

ಹೀಗೆ ಮಾಡಿ: ಯಾವುದೇ ಮೇಕಪ್ ಮೂರು ಹಂತಗಳಲ್ಲಿ ನಡೆಯಬೇಕು. ಮೊದಲು ಮುಖವನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಂಡು, ಮೃದುವಾದ ಬಟ್ಟೆಯಿಂದ ಒರೆಸಿಕೊಳ್ಳಿ. ನಂತರ ಚರ್ಮಕ್ಕೆ ಅಗತ್ಯವಾಗಿರುವ ಮಾಯಿಶ್ಚರೈಸರ್ ಅನ್ನು ಮುಖದ ಎಲ್ಲೆಡೆಯೂ ಸಮಾನವಾಗಿ ಹರಡಿಕೊಳ್ಳುವಂತೆ ಹಚ್ಚಿಕೊಳ್ಳಿ. ಆನಂತರವೇ ಪ್ರೈಮರ್ ಹಚ್ಚಿ, ನಂತರ ಫೌಂಡೇಷನ್ ಬಳಸಿ.

*ಫೌಂಡೇಷನ್ ಆದಷ್ಟೂ ಲೈಟ್ ಆಗಿರಲಿ. ಬ್ಲಶ್ ಮಾಡುವಾಗ ಕ್ರೀಮ್ ಬ್ಲಶ್ ಇದ್ದರೆ ಒಳಿತು. ಫೌಂಡೇಷನ್ ಹಚ್ಚಿಕೊಂಡ ಬಳಿಕ ತುಸು ತೆಳುವಾಗಿ ಕಾಂಪ್ಯಾಕ್ಟ್ ಪೌಡರ್ ಹಚ್ಚಿಕೊಳ್ಳಿ. ನಿಮ್ಮ ಚರ್ಮದ ಬಣ್ಣಕ್ಕೆ ಸೂಕ್ತವಾಗುವಂಥ ಪೌಡರ್ ಅನ್ನು ಬಳಸಿ

* ಕಣ್ಣುಗಳಿಗೆ ಐಶ್ಯಾಡೋ ಬಳಸುವಾಗ ತುಸು ಗಾಢ ಬಣ್ಣ ಬಳಸಿ. ಕಂದು, ಗುಲಾಬಿ ಬಣ್ಣ ಚೆನ್ನಾಗಿ ಒಪ್ಪುತ್ತದೆ

*ಐಲೈನರ್ ಹಚ್ಚುವಾಗ ಪೆನ್ಸಿರ್ ಐಲೈನರ್‌ ಬಳಸಿ. ವಾಟರ್‌ಪ್ರೂಫ್ ಕಾಜಲ್ ಹಚ್ಚಿಕೊಳ್ಳಿ

*ಮಳೆಗಾಲದಲ್ಲಿ ದೀರ್ಘಕಾಲ ಉಳಿಯುವಂಥ ಲಿಪ್‌ಸ್ಟಿಕ್ ಅನ್ನೇ ಬಳಸಿ. ಮ್ಯಾಟ್ ಲಿಪ್‌ಸ್ಟಿಕ್ ಬಳಸುವುದು ಅತ್ಯುತ್ತಮ ಆಯ್ಕೆ. ಲಿಪ್‌ ಗ್ಲಾಸ್ ಬಳಸುವುದನ್ನು ಸಾಧ್ಯವಾದಷ್ಟೂ ತಡೆಯಿರಿ. ಏಕೆಂದರೆ ಮಳೆಯಲ್ಲಿ ನೆನೆದಾಗ ಗ್ಲಾಸಿಯಾಗಿರುವ ಲಿಪ್‌ಸ್ಟಿಕ್ ತುಟಿಯ ಅಂಚುಗಳಿಂದ ಹೊರಬಂದು ಆಭಾಸಕ್ಕೀಡಾಗುವಂತೆ ಮಾಡುವ ಸಾಧ್ಯತೆ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.