ಅಪ್ಪನ ಪ್ರೀತಿ,ತ್ಯಾಗದ ನೆನಪಿನ ಸಿನಿಮಾ

7

ಅಪ್ಪನ ಪ್ರೀತಿ,ತ್ಯಾಗದ ನೆನಪಿನ ಸಿನಿಮಾ

Published:
Updated:
ಅಪ್ಪನ ಪ್ರೀತಿ,ತ್ಯಾಗದ ನೆನಪಿನ ಸಿನಿಮಾ

ನಾಳೆ (ಭಾನುವಾರ 17) ಅಪ್ಪನ ದಿನ. ಅಪ್ಪನ ಜೊತೆಗಿನ ಪ್ರೀತಿ, ಬಾಂಧವ್ಯವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ದಿನವೂ ಇದು. ಅಪ್ಪನ ಪ್ರೀತಿ, ತ್ಯಾಗವನ್ನೂ ನೆನಪಿಸಿಕೊಳ್ಳಬೇಕು. ಅಪ್ಪನ ಪ್ರೀತಿ, ಕಾಳಜಿಯನ್ನು ನೆನಪಿಸಿಕೊಳ್ಳುವ ಒಂದಿಷ್ಟು ಸಿನಿಮಾಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.  ಆತನ ಜೊತೆಗಿನ ಬಾಂಧವ್ಯ, ಹಳೆಯ ದಿನಗಳನ್ನು ಸಿನಿಮಾ ನೋಡುತ್ತಾ ಮೆಲುಕು ಹಾಕಬಹುದು ಎಂದು ನೆಟ್‌ಫ್ಲಿಕ್ಸ್‌ ಹೇಳಿಕೊಂಡಿದೆ. ನೆಟ್‌ಫ್ಲಿಕ್ಸ್‌ಗೆ ಚಂದಾದಾರರಾದರೆ ಈ ಸಿನಿಮಾಗಳನ್ನು ನಿಮ್ಮ ಸ್ಮಾರ್ಟ್‌ ಟಿವಿ, ಕಂಪ್ಯೂಟರ್‌ ಹಾಗೂ ಫೋನ್‌ಗಳಲ್ಲಿ ಆನಂದಿಸಬಹುದು.

ದಂಗಲ್‌

ಅಮೀರ್ ಖಾನ್ ನಟಿಸಿದ್ದ 'ದಂಗಲ್' ಚಿತ್ರ ಕುಸ್ತಿಪಟು ಮಹಾವೀರ್ ಸಿಂಗ್ ಪೋಗಟ್ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳಾದ ಗೀತಾ ಪೋಗಟ್ ಹಾಗೂ ಬಬಿತಾ ಕುಮಾರಿ ಅವರ ಕುರಿತಾಗಿದೆ. ತನ್ನ ಜೀವನದ ಕನಸನ್ನು ಈಡೇರಿಸಿಕೊಳ್ಳಲು ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ಕುಸ್ತಿ ಕಲಿಸಿ, ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಮಿಂಚಬೇಕು ಎಂಬುದು ತಂದೆ ಮಹಾವೀರ್ ಸಿಂಗ್ ಪೋಗಟ್ ಆಸೆ. ಮಕ್ಕಳು ಸಾಧನೆ ಮಾಡಿದಾಗಲೆಲ್ಲಾ ನನ್ನ ಮಕ್ಕಳು ಯಾವ ಗಂಡು ಮಕ್ಕಳಿಗಿಂತಾ ಕಡಿಮೆ ಎಂದು ಹೆಮ್ಮೆ ಪಡುವ ತಂದೆಯ ಸ್ಫೂರ್ತಿದಾಯಕ ಕತೆ ಈ ಚಿತ್ರದ್ದು.

*ಸ್ಟ್ರಾಂಜೆರ್‌ ಥಿಂಗ್ಸ್‌– ಚೀಫ್‌ ಹೊಪ್ಪರ್‌ 

‘ನಾನು ನಿನಗೆ ನೋವು ಮಾಡಲು ಇಷ್ಟಪಡುವುದಿಲ್ಲ, ಹಾಗೇ ನಾನು ನಿನ್ನನ್ನು ಕಳೆದುಕೊಳ್ಳಲೂ ಬಯಸುವುದಿಲ್ಲ’ ಎಂಬುದು ಎಲ್ಲಾ ಅಪ್ಪಂದಿರು ತಮ್ಮ ಮಕ್ಕಳಿಗೆ ಹೇಳುವ ಮಾತು ಇದು. ಆದರೆ ಅವರು ಯಾವತ್ತೂ ಬಾಯಿಬಿಟ್ಟು ಈ ಮಾತು ಹೇಳಲಾರರು. ಅವರ ಭಾವನೆಗಳಲ್ಲೇ ಇದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಇದೆಲ್ಲವೂ ‘ಸ್ಟ್ರಾಂಜೆರ್‌ ಥಿಂಗ್ಸ್‌– ಚೀಫ್‌ ಹೊಪ್ಪರ್‌’ ಸಿನಿಮಾದಲ್ಲಿದೆ. ಚೀಫ್‌ ಹೊಪ್ಪರ್‌ ಬಾಲಕಿಯನ್ನು ದತ್ತು ಪಡೆದು, ತನ್ನ ಮಗಳಂತೆಯೇ ಬೆಳೆಸುತ್ತಾನೆ. ಇವರಿಬ್ಬರ ನಡುವಿನ ಬಾಂಧವ್ಯ, ಪ್ರೀತಿಯ ಪ್ರತಿ ದೃಶ್ಯಗಳು ನೋಡುಗರ ಕಣ್ಣಂಚು ಒದ್ದೆ ಮಾಡುತ್ತವೆ. ಹೃದಯ ಭಾರ ಮಾಡುತ್ತವೆ.

*

ಫುಲ್ಲರ್‌ ಹೌಸ್‌– ಡ್ಯಾನಿ ಟನ್ನರ್‌ 

‘ಕೆಟ್ಟ ತಂದೆ’ ಎಂಬ ಸ್ಟಿರಿಯೋ ಟೈಪ್‌ಗಳನ್ನು ಮುರಿದ ಸಿನಿಮಾವಿದು. ತಂದೆ ಡ್ಯಾನಿಗೆ ತುಂಬಾ ಕ್ಲೀನ್‌ ಆಗಿರಬೇಕು ಮತ್ತು ಆತನ ತನ್ನ  ಮೂವರು ಮಕ್ಕಳ ಬಗ್ಗೆ ತುಂಬಾ ಕಾಳಜಿ ವಹಿಸಿರುತ್ತಾನೆ. ತನ್ನ ಈ ಸ್ವಭಾವದಿಂದಲೇ ಮುಜುಗರಕ್ಕೊಳಗಾಗುತ್ತಾನೆ ಡ್ಯಾನಿ. ಅಪ್ಪ– ಮಕ್ಕಳ ಮಧುರ ಸಂಬಂಧದ ಕುರಿತು ಈ ಸಿನಿಮಾ ಇದೆ.

*

ಸಂತ ಕ್ಲಾರಿಟ ಡಯೆಟ್‌– ಜೋಯಲ್‌ ಹಮ್ಮೊಂಡ್‌

ಜೋಯಲ್‌ ಹಮ್ಮೊಂಡ್‌ ಅಮೆರಿಕನ್‌ ಕುಟುಂಬದ ಹಿರಿಯ ವ್ಯಕ್ತಿ.  ಮಗಳು ಅಬ್ಬಿ ತೋರಿಸುವ ವಿಚಿತ್ರ ನಡವಳಿಕೆಯಿಂದ ಅವನ ಜೀವನವೇ ಬದಲಾಗುತ್ತದೆ. ಆಕೆ ಅಜಾಗರೂಕತೆ ಹಾಗೂ ನಿಯಮಗಳನ್ನು ಮುರಿಯುವುದನ್ನು ಅವನು ಗಮನಿಸುತ್ತಾನೆ. ಕುಟುಂಬದ ಜನರ ಕಾಳಜಿ ಹಾಗೂ ಮಾತುಕತೆಯಿಂದ ಮಾತ್ರ ಈ ಸಮಸ್ಯೆಗೆ ಪರಿಹಾರ ಎಂದು ಅಂದುಕೊಂಡು, ಮಗಳು ಅಬ್ಬಿಗೆ ‘ಇನ್ನು ಮುಂದೆ ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡುವ’ ಎಂದು ಹೇಳುತ್ತಾನೆ.

*

ಕ್ರೇಜಿ ಸ್ಟುಪಿಡ್‌ ಲವ್‌–ಕಾಲ್‌ ವೀವರ್‌

ಪತ್ನಿ ಎಮಿಲಿ ತನ್ನಿಂದ ದೂರವಾಗಿದ್ದರೂ, ಆತ್ಮಸಂಗಾತಿಯ ನೆನಪಿನಲ್ಲಿಯೇ ದಿನ ಕಳೆಯುತ್ತಿದ್ದಾನೆ ಕಾಲ್‌. ಆತ್ಮ ಸಂಗಾತಿಯನ್ನು ಎಂದಿಗೂ ದೂರ ಮಾಡಕ್ಕಾಗದು. ಆಕೆಯ ಜೊತೆಗಿನ ಜಗಳಗಳೂ ಮುಗಿಯುವುದಿಲ್ಲ ಎಂದು ನಂಬಿರುವ ಅವನಿಗೆ ಸಂಬಂಧಗಳು ಗುಲಾಬಿ ಹೂವಿನ ಹಾಸಿಗೆಯಲ್ಲ. ಅದೂ ತ್ಯಾಗ ಹಾಗೂ ಹೊಂದಾಣಿಕೆಯನ್ನೂ ಬೇಡುತ್ತದೆ ಎಂಬ ಅರಿವಿದೆ. ಮಗನ ಶಾಲೆ ಮುಂದೆ ಹೋಗಿ ಕಾಲ್‌ ಹೇಳುವ ಮಾತುಗಳು ಪ್ರೇಕ್ಷಕರ ಕಣ್ಣಲ್ಲೂ ನೀರು ತರಿಸುತ್ತದೆ. ‘ನಾನು ಆಕೆಯನ್ನೂ ದ್ವೇಷಿಸುವಾಗಲೂ ಆಕೆ ಬಗ್ಗೆ ನನಗೆ ಅಗಾಧ ಪ್ರೀತಿಯಿತ್ತು. ಮದುವೆಯಾದ ದಂಪತಿಗೆ ಇದು ಅರ್ಥವಾಗುತ್ತದೆ. ಆದರೆ ಇದು ವರ್ಕೌಟ್‌ ಆಗುತ್ತದೆ ಎಂಬುದು ನನಗೆ ತಿಳಿದಿಲ್ಲ. ನಿನಗೆ ಆತ್ಮ ಸಂಗಾತಿ ಸಿಕ್ಕಾಗ ನೀನು ಆಕೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬೇಡ’ ಎಂಬ ಮಾತು ಮನಸ್ಸನ್ನು ಕಾಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry