ಈದ್‌ ಸಡಗರಕ್ಕೆ ಹರಿಯಲಿದೆ ‘ಹಾಲಿನ ಹೊಳೆ..!’

7
ಒಂದೇ ದಿನ 3 ಲಕ್ಷ ಲೀಟರ್‌ ಹಾಲಿಗೆ ಬೇಡಿಕೆ; ಸೊಲ್ಲಾಪುರ, ಅಕ್ಕಲಕೋಟೆಗೂ ಹಾಲು ಪೂರೈಕೆ

ಈದ್‌ ಸಡಗರಕ್ಕೆ ಹರಿಯಲಿದೆ ‘ಹಾಲಿನ ಹೊಳೆ..!’

Published:
Updated:
ಈದ್‌ ಸಡಗರಕ್ಕೆ ಹರಿಯಲಿದೆ ‘ಹಾಲಿನ ಹೊಳೆ..!’

ವಿಜಯಪುರ: ‘ಈದ್‌– ಉಲ್‌–ಫಿತ್ರ್‌’ ಹಬ್ಬದ ಆಚರಣೆಗಾಗಿ ವಿಜಯಪುರ– ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಒಕ್ಕೂಟಕ್ಕೆ ಮೂರು ಲಕ್ಷ ಲೀಟರ್‌ ಹಾಲಿಗೆ ಬೇಡಿಕೆ ಬಂದಿದೆ.

ಈದ್‌ ಹಬ್ಬದ ದಿನ ಈ ಭಾಗದಲ್ಲಿ ಪ್ರತಿ ಮುಸ್ಲಿಂ ಕುಟುಂಬವೂ ‘ಶೀರ್‌ ಕುರ್ಮಾ’ ವಿಶೇಷ ಖಾದ್ಯ ತಯಾರಿಸಲಿದೆ. ಇದಕ್ಕೆ ಹಾಲು ಅತ್ಯಗತ್ಯ. ಹಬ್ಬಕ್ಕಾಗಿ ಎಂಥ ಬಡ ಕುಟುಂಬವಾದರೂ

ಕನಿಷ್ಠ ಐದು ಲೀಟರ್‌ ಹಾಲು ಖರೀದಿಸುತ್ತದೆ. ಶ್ರೀಮಂತರು ಹತ್ತಾರು ಲೀಟರ್‌ ಖರೀದಿ ಮಾಡುತ್ತಾರೆ. ಹೀಗಾಗಿ ಒಂದೇ ದಿನ ಏಕಾಏಕಿ ಬೇಡಿಕೆ ಸೃಷ್ಟಿಯಾಗಿದೆ.

ಜಿಲ್ಲಾ ಹಾಲು ಒಕ್ಕೂಟ ಸೇರಿದಂತೆ, ಕೆಲ ಖಾಸಗಿ ಡೇರಿಗಳು ಸಹ ಈ ಬೇಡಿಕೆ ಪೂರೈಸಲು ಅಗತ್ಯ ಸಿದ್ಧತೆಯಲ್ಲಿ ತಲ್ಲೀನವಾಗಿರುವ ಚಿತ್ರಣ ಗುರುವಾರ ಗೋಚರಿಸಿತು.

‘ಒಕ್ಕೂಟದಡಿಯ ಸಹಕಾರ ಸಂಘಗಳ ಮೂಲಕ ಪ್ರಸ್ತುತ ನಿತ್ಯ 1.87 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಕೇಂದ್ರ ಕಚೇರಿಯ ಡೇರಿಯಲ್ಲಿ 2.60 ಲಕ್ಷ ಲೀಟರ್‌ ಹಾಲು ಸಂಗ್ರಹಿಸಿದ್ದು, 40 ಸಾವಿರ ಲೀಟರ್‌ ಹಾಲನ್ನು ಶಿವಮೊಗ್ಗದಿಂದ ತರಿಸಿಕೊಳ್ಳಲಾಗುತ್ತಿದೆ’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್‌ ತಿಳಿಸಿದರು.

‘ಲಭ್ಯವಿರುವ ಹಾಲನ್ನು ಪ್ಯಾಕಿಂಗ್‌ ಮಾಡಿ ಸಂಗ್ರಹಿಸಿಡಲಾಗಿದೆ. ಹಬ್ಬದ ದಿನಾಂಕ ಘೋಷಣೆಯಾದ ಬಳಿಕ ಬೇಡಿಕೆ ಇರುವ ಕಡೆಗೆ ಒಕ್ಕೂಟದಿಂದಲೇ ಸರಬರಾಜು ಮಾಡುತ್ತೇವೆ’ ಎಂದು ಅವರು ವಿವರಿಸಿದರು.

‘2017ರ ಈದ್‌ ಸಂಭ್ರಮದಲ್ಲಿ ಹಾಲು ಒಕ್ಕೂಟವು ವಿಜಯಪುರ ಜಿಲ್ಲೆಯಲ್ಲಿ 1,46,836 ಲೀಟರ್‌ ಮಾರಾಟ ಮಾಡಿತ್ತು. ಬಾಗಲಕೋಟೆ ಜಿಲ್ಲೆಯಲ್ಲಿ 82,173 ಲೀಟರ್‌, ನೆರೆಯ ಸೊಲ್ಲಾಪುರದಲ್ಲಿ 24,782 ಲೀಟರ್‌ ಮಾರಾಟ ಮಾಡಿತ್ತು.

ಈ ಬಾರಿ ಸೊಲ್ಲಾಪುರ, ಅಕ್ಕಲಕೋಟೆಯಿಂದ ಹೆಚ್ಚುವರಿಯಾಗಿ50 ಸಾವಿರ ಲೀಟರ್‌ ಹಾಲಿಗೆ ಬೇಡಿಕೆ ಬಂದಿದೆ. ವಿಜಯಪುರ ಜಿಲ್ಲೆಯಿಂದ 1.60 ಲಕ್ಷ ಲೀಟರ್‌, ಬಾಗಲಕೋಟೆ ಜಿಲ್ಲೆಯಿಂದ 90 ಸಾವಿರ ಲೀಟರ್‌ ಹಾಲಿಗೆ ಬೇಡಿಕೆ ಬಂದಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry