ಜವಾಬ್ದಾರಿ ಯಾಕಿಲ್ಲ?

7

ಜವಾಬ್ದಾರಿ ಯಾಕಿಲ್ಲ?

Published:
Updated:

ಜೂನ್‌ 11ರಂದು ಗಾಂಧಿಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು, ರಾಜ್ಯದಲ್ಲಿರುವ ಭ್ರಷ್ಟಾಚಾರದ ಬಗ್ಗೆ ಮತ್ತು ಕೆಲವು ಟಿ.ವಿ. ವಾಹಿನಿಗಳ ಬಗ್ಗೆ ವಿಷಾದದ ಮಾತುಗಳನ್ನಾಡಿದ್ದರು. ಗಾಂಧಿಭವನ ಪರಿವಾರದ ಒಬ್ಬ ಸಕ್ರಿಯ ವ್ಯಕ್ತಿಯಾಗಿರುವ ನನಗೆ ಅವರ

ವಿಷಾದದ ಮಾತುಗಳಿಂದ ಬೇಸರವೆನಿಸಿತು. ಹಿಂದಿನ ಬಾರಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗಾಂಧಿಭವನದ ಅಭಿವೃದ್ಧಿಯಲ್ಲಿ ಆಸಕ್ತಿ ವಹಿಸಿದ್ದರ ಫಲವಾಗಿ ಗಾಂಧಿ ಭವನ ಇಂದು ಈ ಸ್ಥಿತಿಗೆ ತಲುಪಲು ಸಾಧ್ಯವಾಗಿದೆ. ಅನೇಕ ಗಾಂಧಿವಾದಿಗಳು ಸಹ ಇದಕ್ಕೆ ಸಹಕಾರ ನೀಡಿದ್ದಾರೆ.

ಗಾಂಧಿಭವನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿವಂಗತ ಪ್ರೊ. ಎಚ್.ಆರ್. ದಾಸೇಗೌಡರ ಹೆಸರನ್ನು ಆ ಕಾರ್ಯಕ್ರಮದ ನಿರೂಪಣೆ ಮಾಡಿದವರು ಸ್ಮರಿಸಲಿಲ್ಲ. ದಾಸೇಗೌಡರು ಗಾಂಧಿಭವನದ ಒಂದು ಭಾಗದಲ್ಲಿ ಗಾಂಧಿ ಸಾಹಿತ್ಯದ ಪ್ರಕಟಣೆ ಹಾಗೂ ಮಾರಾಟದ ಉದ್ದೇಶದಿಂದ ಪುಸ್ತಕ ಮಳಿಗೆಯನ್ನು ಪ್ರಾರಂಭಿಸಿದ್ದರು. ಆದರೆ ಆ ಮಳಿಗೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಮೂರು ವರ್ಷಗಳಾಗುತ್ತಾ ಬಂದಿವೆ.

ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಪಡೆದ ಗಾಂಧಿಭವನಕ್ಕೆ, ಗಾಂಧಿ ವಾದವನ್ನು ಉಪದೇಶ ಮಾಡಿದಂತೆ ಅನುಷ್ಠಾನವನ್ನೂ ಮಾಡುವ ಜವಾಬ್ದಾರಿ ಏಕಿಲ್ಲ?

-ಸಿ. ದೊರೆಸ್ವಾಮಿ, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry