ಅಭಿಮಾನಿಗೆ ಚಪ್ಪಲಿ ನೀಡಿದ ಸಚಿವ!

7

ಅಭಿಮಾನಿಗೆ ಚಪ್ಪಲಿ ನೀಡಿದ ಸಚಿವ!

Published:
Updated:
ಅಭಿಮಾನಿಗೆ ಚಪ್ಪಲಿ ನೀಡಿದ ಸಚಿವ!

ಸಿಂದಗಿ (ವಿಜಯಪುರ ಜಿಲ್ಲೆ):  ವಿಧಾನಸಭಾ ಚುನಾವಣೆಯಲ್ಲಿ ಎಂ.ಸಿ. ಮನಗೂಳಿ ಅವರು ಗೆದ್ದರೆ ಮಾತ್ರ ಚಪ್ಪಲಿ ಹಾಕುವುದಾಗಿ ಶಪಥ ಮಾಡಿದ್ದ ಅಭಿಮಾನಿಯೊಬ್ಬರಿಗೆ, ತೋಟಗಾರಿಕಾ ಸಚಿವ ಮನಗೂಳಿ ಅವರು ಹೊಸ ಚಪ್ಪಲಿ ಕೊಡಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ತಾಲ್ಲೂಕಿನ ಬ್ಯಾಕೋಡ ಗ್ರಾಮದ ಬಸವಪ್ರಭಯ್ಯ ಮಠ, ‘ಮನಗೂಳಿ ಗೆದ್ದರೆ ಚಪ್ಪಲಿ ಧರಿಸುವೆ; ಇಲ್ಲದಿದ್ದರೆ ಬರಿಗಾಲಿನಲ್ಲೇ ನಡೆದಾಡುವೆ’ ಎಂದು ಶಪಥ ಮಾಡಿದ್ದರು. ಚುನಾವಣೆಗೆ 2 ತಿಂಗಳು ಮೊದಲೇ ಚಪ್ಪಲಿ ತ್ಯಜಿಸಿದ್ದರು.

ಗ್ರಾಮದಲ್ಲಿ ಗುರುವಾರ ಸಂಜೆ ನಡೆದ ಸಮಾರಂಭದಲ್ಲಿ ಮಠ ಅವರಿಗೆ ಸ್ವತಃ ಸಚಿವರೇ ಚಪ್ಪಲಿ ನೀಡಿದಾಗ, ‘ಇದು ಮನಗೂಳಿ ಅವರು ಜನರ ಮೇಲೆ ಇಟ್ಟಿರುವ ಅಭಿಮಾನ ತೋರಿಸುತ್ತದೆ‘ ಎಂದು ಸಂತಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry