‘ಸಚಿವ ಶಿವಕುಮಾರ್‌ಗೆ ಮುಂದೆ ಉನ್ನತ ಸ್ಥಾನ’

7

‘ಸಚಿವ ಶಿವಕುಮಾರ್‌ಗೆ ಮುಂದೆ ಉನ್ನತ ಸ್ಥಾನ’

Published:
Updated:

ತುಮಕೂರು: 'ಸಚಿವ ಡಿ.ಕೆ.ಶಿವಕುಮಾರ್ ಮುಂದೊಂದು ದಿನ ಉನ್ನತ ಸ್ಥಾನಕ್ಕೆ ತಲುಪುತ್ತಾರೆ' ಎಂದು ತಿಪಟೂರು ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ಧೇಶ್ವರಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದ್ದಾರೆ.

ಸಚಿವ ಶಿವಕುಮಾರ್ ಅವರು ಶುಭ ಕಾರ್ಯ ಕೈಗೊಳ್ಳುವ ಮೊದಲು ಈ ಸ್ವಾಮೀಜಿಗಳ ಆಶೀರ್ವಾದ ಪಡೆಯುತ್ತಾರೆ. ಈಗಿನ ರಾಜ್ಯ ರಾಜಕೀಯ ಸನ್ನಿವೇಶದಲ್ಲಿ ಶಿವಕುಮಾರ್ ಅವರ ಭವಿಷ್ಯದ ಬಗ್ಗೆ ವಾಹಿನಿಯೊಂದಕ್ಕೆ ಸ್ವಾಮೀಜಿ ಮಾತನಾಡಿದ್ದಾರೆ.

'ಖಾತೆ ಗೊಂದಲ ಹಾಗೂ ಅತೃಪ್ತಿಯನ್ನು ಬದಿಗಿರಿಸಿ ಡಿ.ಕೆ.ಶಿವಕುಮಾರ್ ಅವರು ಯಾವುದೇ ಖಾತೆ ಬಂದರೂ ಕಾಯಕವೇ ಕೈಲಾಸ ಎಂದು ಕೆಲಸ ಮಾಡಲಿ. ಈಗಿರುವ ಸ್ಥಾನದಲ್ಲಿಯೇ ಅವರು ಸಾಧನೆ ಮಾಡಲಿ. ಮುಂದೊಂದು ದಿನ ಅವರಿಗೆ ಉನ್ನತ ಸ್ಥಾನ ಲಭಿಸುತ್ತದೆ' ಎಂದು ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry