ಕಾಂಗ್ರೆಸ್‌ನಲ್ಲಿ ಬುಡುಬುಡಿಕೆ ನಡೆಯಲ್ಲ: ಶಾಮನೂರು

7

ಕಾಂಗ್ರೆಸ್‌ನಲ್ಲಿ ಬುಡುಬುಡಿಕೆ ನಡೆಯಲ್ಲ: ಶಾಮನೂರು

Published:
Updated:
ಕಾಂಗ್ರೆಸ್‌ನಲ್ಲಿ ಬುಡುಬುಡಿಕೆ ನಡೆಯಲ್ಲ: ಶಾಮನೂರು

ದಾವಣಗೆರೆ: ಶಾಸಕ ಎಂ.ಬಿ. ಪಾಟೀಲರ ಬುಡುಬುಡಿಕೆ ಕಾಂಗ್ರೆಸ್‌ನಲ್ಲಿ ನಡೆಯಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು.

ಸಚಿವ ಸ್ಥಾನಕ್ಕಾಗಿ ಎಂ.ಬಿ. ಪಾಟೀಲರು ಪಕ್ಷದ ಮೇಲೆ ಒತ್ತಡ ಹಾಕುತ್ತಿರುವ ಬಗ್ಗೆ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಹೀಗೆ ಉತ್ತರಿಸಿದರು.

‘ನಾವು ಮಾಡುವ ಕೆಲಸ ಮಂತ್ರಿ ಸ್ಥಾನದ ಅಪ್ಪ ಇದ್ಹಂಗೆ! ನಮಗೆ ಜನರ ಸೇವೆ ಮಾಡುವುದೇ ಮುಖ್ಯ ಹೊರತು ಮಂತ್ರಿ ಸ್ಥಾನವಲ್ಲ. ನನಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲೆಯ ಕಾಂಗ್ರೆಸ್‌ ಸದಸ್ಯರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿರುವ ಬಗ್ಗೆ ಪೇಪರ್‌ನಲ್ಲಿ ಓದಿದ್ದೇನೆ. ಆ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ’ ಎಂದು ತಮಗೆ ಸಚಿವ ಸ್ಥಾನ ಕೈತಪ್ಪಿರುವ ಕುರಿತು ಕೇಳಿದ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

‘ವೀರಶೈವ– ಲಿಂಗಾಯತ ಧರ್ಮ ಕುರಿತು ಚರ್ಚಿಸಲು ಇನ್ನೂ ಸಭೆ ಮಾಡಿಲ್ಲ. ಎಲ್ಲರೂ ಒಂದಾಗಿ ಹೋಗೋಣ ಎಂಬುದು ನಮ್ಮ ಆಶಯ. ನಮಗೆ ಕಂಡಿಷನ್‌ ಹಾಕಿದರೆ ನಡೆಯಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry