ಜನರಲ್‌ ಮೋಟರ್ಸ್‌ಗೆ ಮೊದಲ ಮಹಿಳಾ ಸಿಎಫ್‌ಒ

7

ಜನರಲ್‌ ಮೋಟರ್ಸ್‌ಗೆ ಮೊದಲ ಮಹಿಳಾ ಸಿಎಫ್‌ಒ

Published:
Updated:
ಜನರಲ್‌ ಮೋಟರ್ಸ್‌ಗೆ ಮೊದಲ ಮಹಿಳಾ ಸಿಎಫ್‌ಒ

ಹೂಸ್ಟನ್‌: ಅಮೆರಿಕದ ಅತಿದೊಡ್ಡ ಕಾರ್‌ ತಯಾರಿಕಾ ಸಂಸ್ಥೆಯಾಗಿರುವ ಜನರಲ್‌ ಮೋಟರ್ಸ್‌ನ (ಜಿಎಂ) ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ಭಾರತ ಸಂಜಾತೆ ದಿವ್ಯಾ ಸೂರ್ಯದೇವರ (39) ಅವರನ್ನು ನೇಮಿಸಲಾಗಿದೆ.

ವಾಹನ ತಯಾರಿಕಾ ಉದ್ದಿಮೆಯಲ್ಲಿ ಈ ಹುದ್ದೆಗೆ ನೇಮಕಗೊಂಡಿರುವ ಮೊದಲ ಮಹಿಳೆ ಇವರಾಗಿದ್ದಾರೆ. ‘ಜಿಎಂ’ನಲ್ಲಿ ಸದ್ಯಕ್ಕೆ ಕಾರ್ಪೊರೇಟ್ ಹಣಕಾಸಿನ ಉಪಾಧ್ಯಕ್ಷೆಯಾಗಿರುವ ದಿವ್ಯಾ ಅವರು, ಹಾಲಿ ಸಿಎಫ್‌ಒ ಚಕ್‌ ಸ್ಟೀವನ್ಸ್‌ ಅವರಿಂದ ತೆರವಾಗಲಿರುವ ಹುದ್ದೆಯನ್ನು ಸೆಪ್ಟೆಂಬರ್‌ 1ರಿಂದ ನಿಭಾಯಿಸಲಿದ್ದಾರೆ.

ಚೆನ್ನೈದಲ್ಲಿ ಜನಿಸಿರುವ ದಿವ್ಯಾ ಅವರು, ಸಂಸ್ಥೆಯ ಸಿಇಒ ಮೇರಿ ಬರ್‍ರಾ ಅವರ ಕೈಕೆಳಗೆ ಕೆಲಸ ಮಾಡಲಿದ್ದಾರೆ. ಮೇರಿ ಬರ್‍ರಾ ಅವರು ಕೂಡ, ವಾಹನ ತಯಾರಿಕಾ ಕಂಪನಿ ಮುನ್ನಡೆಸುತ್ತಿರುವ ವಿಶ್ವದ ಏಕೈಕ ಮಹಿಳೆಯಾಗಿದ್ದಾರೆ.

ಬರ್‍ರಾ ಮತ್ತು ದಿವ್ಯಾ ಅವರು, ವಾಹನ ಉದ್ದಿಮೆಯಲ್ಲಿ ಸಿಇಒ ಮತ್ತು ಸಿಎಫ್‌ಒ ಹುದ್ದೆ ನಿಭಾಯಿಸುತ್ತಿರುವ ಮೊದಲ ಮಹಿಳೆಯರು ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry