ವಾಪಸಾದ ಮಾರನೇ ದಿನವೇ ಸಭೆ ನಡೆಸಿದ ಸಿ.ಎಂ ಪರ್‍ರೀಕರ್‌

7

ವಾಪಸಾದ ಮಾರನೇ ದಿನವೇ ಸಭೆ ನಡೆಸಿದ ಸಿ.ಎಂ ಪರ್‍ರೀಕರ್‌

Published:
Updated:
ವಾಪಸಾದ ಮಾರನೇ ದಿನವೇ ಸಭೆ ನಡೆಸಿದ ಸಿ.ಎಂ ಪರ್‍ರೀಕರ್‌

ಪಣಜಿ: ಅಮೆರಿಕದಿಂದ ವಾಪಸಾದ ಮಾರನೇ ದಿನವೇ ಗೋವಾ ಮುಖ್ಯಮಂತ್ರಿ ಮನೋಹರ ಪರ್‍ರೀಕರ್‌ ಅವರು ತಮ್ಮ ಮನೆದೇವರಾದ ಖಂಡೋಲಾ ಗ್ರಾಮದ ದೇವಕಿ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದರು.

ಬಳಿಕ ಪಣಜಿಗೆ ಮರಳಿ ಅಲ್ಲಿನ ಮಹಾಲಕ್ಷ್ಮಿ ದೇವಾಲಯಕ್ಕೂ ಭೇಟಿ ನೀಡಿದರು. ನಂತರ ಸಚಿವಾಲಯದ ತಮ್ಮ ಕಚೇರಿಗೆ ತೆರಳಿದ ಅವರು, ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಮಾಹಿತಿ ಪಡೆದುಕೊಂಡರು.

ಮೇದೋಜೀರಕ ಗ್ರಂಥಿ ಉರಿಯೂತ ಚಿಕಿತ್ಸೆಗಾಗಿ ಮೂರು ತಿಂಗಳು ಅಮೆರಿಕದಲ್ಲಿದ್ದ ಪರ್‍ರೀಕರ್‌ ಗುರುವಾರ ಸಂಜೆಯಷ್ಟೇ ಗೋವಾಕ್ಕೆ ಮರಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry