ಸಿಐಎ ವಿರುದ್ಧ ಪ್ರತಿಭಟನೆ: ವಿಎಚ್‌ಪಿ ಎಚ್ಚರಿಕೆ

7

ಸಿಐಎ ವಿರುದ್ಧ ಪ್ರತಿಭಟನೆ: ವಿಎಚ್‌ಪಿ ಎಚ್ಚರಿಕೆ

Published:
Updated:

ನವದೆಹಲಿ: ಅಮೆರಿಕದ ಗುಪ್ತಚರ ಇಲಾಖೆ ಸಿಐಎ ‘ಧಾರ್ಮಿಕ ಭಯೋತ್ಪಾದಕ ಸಂಘಟನೆ’ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ), ಈಗ ಸಿಐಎ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ವಿಎಚ್‌ಪಿ, ಬಜರಂಗ ದಳ ‘ಧಾರ್ಮಿಕ ಭಯೋತ್ಪಾದಕ ಸಂಘಟನೆಗಳು’ ಎಂದು ಸಿಐಎ ಹೇಳಿದ್ದಾಗಿ ವರದಿಯಾಗಿತ್ತು.

‘ಸಿಐಎ ಆರೋಪ’ ಆಧಾರರಹಿತ ಹಾಗೂ ‘ಸುಳ್ಳು’ ಎಂದು ಹೇಳಿರುವ ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್, ‘ಒಸಾಮಾ ಬಿನ್ ಲಾಡೆನ್‌ನನ್ನು ರೂಪಿಸಿದ ಸಿಐಎಗೆ ಬೋಧನೆ ಮಾಡುವ ಯಾವುದೇ ನೈತಿಕ ಹಕ್ಕು ಇಲ್ಲ’ ಎಂದಿದ್ದಾರೆ.

ವಿಎಚ್‌ಪಿ ರಾಷ್ಟ್ರೀಯ ಸಂಘಟನೆಯಾಗಿದ್ದು ದೇಶಕ್ಕಾಗಿ ಕಾರ್ಯನಿರ್ವಹಿಸುತ್ತದೆ ಎಂದು ಜೈನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry