‘ಹಿರಿಯರ ರಕ್ಷಣೆ ಸಮಾಜದ ಹೊಣೆ’

7

‘ಹಿರಿಯರ ರಕ್ಷಣೆ ಸಮಾಜದ ಹೊಣೆ’

Published:
Updated:
‘ಹಿರಿಯರ ರಕ್ಷಣೆ ಸಮಾಜದ ಹೊಣೆ’

ಬೆಂಗಳೂರು: ‘ವೃದ್ಧರ ರಕ್ಷಣೆ ನಮ್ಮೆಲ್ಲರ ಕರ್ತವ್ಯ, ಹೊಣೆಯಾಗಬೇಕು’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹೇಳಿದರು.

ನಗರದ ನೈಂಟಿಗೇಲ್ಸ್‌ ಮೆಡಿಕಲ್‌ ಟ್ರಸ್ಟ್‌(ಎನ್‌ಎಮ್‌ಟಿ) ಹಾಗೂ ನಗರ ಪೊಲೀಸ್‌ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಿಶ್ವ ಹಿರಿಯರ ಶೋಷಣೆ ನಿವಾರಣೆ ದಿನಾಚರಣೆ’ ಜಾಗೃತಿ ಕಾರ್ಯಕ್ರಮ ಹಾಗೂ ಬೀದಿ ನಾಟಕ ಪ್ರದರ್ಶನದಲ್ಲಿ ಅವರು ಮಾತನಾಡಿದರು.

‘ಮಾನವ ಹಕ್ಕುಗಳು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ, ಹಿರಿಯರಿಗೂ ಸಂಬಂಧಿಸಿದ್ದು. ವೃದ್ಧರ ನಿಂದನೆ, ಶೋಷಣೆ ಸಲ್ಲದು. ಈ ನಿಟ್ಟಿನಲ್ಲಿ ನೈಂಟಿಗೇಲ್ಸ್‌ ಟ್ರಸ್ಟ್‌ ಕೈಗೊಂಡಿರುವ ಜಾಗೃತಿ ಕಾರ್ಯಕ್ರಮ ಮಾದರಿಯಾಗಿದೆ’ ಎಂದರು.

‘ರಾಜ್ಯದೆಲ್ಲೆಡೆ ‘ಹಿರಿಯರ ಶೋಷಣೆ ಅಪರಾಧ’ ಎಂಬ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಮಾನವ ಹಕ್ಕುಗಳ ಆಯೋಗವು ಇಂತಹ ಕಾರ್ಯಕ್ರಮಗಳನ್ನು ಬೆಂಬಲಿಸುತ್ತದೆ. ಹಿರಿಯರ ಸಹಾಯವಾಣಿ–1090 ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿ’ ಎಂದು ಅವರು ತಿಳಿಸಿದರು. 

ಇದೇ ಸಂದರ್ಭ ‘ಹಿರಿಯರ ಶೋಷಣೆ– ನಿವಾರಣೆ’ ಕುರಿತು ಬೀದಿ ನಾಟಕ ಪ್ರದರ್ಶನ ನಡೆಯಿತು.

ಅಂಕಿ-ಅಂಶ

ನಗರದ ಒಟ್ಟು ವೃದ್ಧರ ಸಂಖ್ಯೆ–2,40.000

ವಯೋವೃದ್ಧರ ಸಹಾಯವಾಣಿಗೆ ಪ್ರತಿದಿನ ಬರುವ ಕರೆಗಳು– 60

2002 ರಿಂದ ಮೇ 2018ವರೆಗೆ ಬಂದ ಒಟ್ಟು ಕರೆಗಳು– 1,80,415

ದಾಖಲಾದ ಗಂಭೀರ ಸ್ವರೂಪದ ದೂರುಗಳು–9,202

ಪರಿಹಾರವಾದ ದೂರುಗಳು–4817

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry