ಉಚಿತ ಬಸ್‌ ಪಾಸ್‌ ನೀಡಲು ಆಗ್ರಹ

7

ಉಚಿತ ಬಸ್‌ ಪಾಸ್‌ ನೀಡಲು ಆಗ್ರಹ

Published:
Updated:

ಭಾಲ್ಕಿ: ಸರ್ಕಾರ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪದಾಧಿಕಾರಿಗಳು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವುದರ ಮೂಲಕ ಅನುಕೂಲ ಮಾಡಿಕೊಡಬೇಕು. ಉಚಿತ ಬಸ್‌ ಪಾಸ್‌ ವಿತರಣೆಯಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ರೀತಿಯ ಹೊರೆಯಾಗುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು. ಎಬಿವಿಪಿ ಜಿಲ್ಲಾ ಘಟಕದ ಸಂಚಾಲಕ ಈಶ್ವರ ರುಮ್ಮಾ, ಪ್ರಮುಖರಾದ ವಿಶಾಲ ಘಾಳೆ, ಬಸವರಾಜ, ಆನಂದ, ವಿಜಯ, ರಾಜಕುಮಾರ ಅಭಿಷೇಕ, ಪೂಜಾ, ದಿಪೀಕಾ, ರಾಧಿಕಾ, ಕವಿತಾ, ರಂಜನಾ, ಭಾಗ್ಯಶ್ರಿ, ರೇಣುಕಾ, ಮಾಲಾಶ್ರಿ, ಅಂಬಿಕಾ, ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry