ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2.5 ಲಕ್ಷ ಸಸಿ ನೆಡುವ ಗುರಿ

ಔರಾದ್‌: ಅರಣ್ಯ ಕೃಷಿಯತ್ತ ರೈತರ ಚಿತ್ತ
Last Updated 16 ಜೂನ್ 2018, 6:03 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ರೈತರು ಅರಣ್ಯ ಕೃಷಿ ಕಡೆ ಹೆಚ್ಚಿನ ತೋರುತ್ತಿದ್ದು, ರೈತರಿಗೆ ವಿತರಿಸಲು ಅರಣ್ಯ ಇಲಾಖೆಯಿಂದ ಇಲ್ಲಿಯ ನರ್ಸರಿಯಲ್ಲಿ ವಿವಿಧ ತಳಿಯ 3 ಲಕ್ಷ ಸಸಿಗಳು ಬೆಳೆಸಲಾಗಿದೆ.

‘ತಾಲ್ಲೂಕಿನಲ್ಲಿ ಈ ವರ್ಷ 30 ಸಾವಿರ ಶ್ರೀಗಂಧ ಬೆಳೆಸಲು ಗುರಿ ಇಟ್ಟುಕೊಳ್ಳಲಾಗಿದೆ. ಅಕನಾಪುರ ಗ್ರಾಮದ ರೈತರು 11 ಸಾವಿರ ಶ್ರೀಗಂಧದ ಸಸಿ ಖರೀದಿ ಮಾಡಿದ್ದಾರೆ. ಒಂದು ಸಸಿಗೆ ₹ 3 ದರ ನಿಗದಿ ಮಾಡಲಾಗಿದೆ. ನಾಟಿ ಮಾಡಿದ ಪ್ರತಿ ಸಸಿಗೆ ಪೋಷಣೆ ಮಾಡಲು ₹14 ಸಹಾಯಧನ ಕೊಡಲಾಗುತ್ತದೆ' ಎಂದು ಉಪ ವಲಯ ಅರಣ್ಯಾಧಿಕಾರಿ ಹಾವಪ್ಪ ಶೆಂಬೆಳ್ಳಿ ತಿಳಿಸಿದ್ದಾರೆ.

'ಈಗಾಗಲೇ ತಾಲ್ಲೂಕಿನ ಹಲವು ರೈತರು ಹೆಬ್ಬೇವು ಸಸಿ ನಾಟಿ ಮಾಡಿದ್ದಾರೆ. ಈ ವರ್ಷ ಮತ್ತೆ 21 ಸಾವಿರ ಹೆಬ್ಬೇವಿನ ಸಸಿಗಳಿಗೆ ಬೇಡಿಕೆ ಇದೆ. 4 ಸಾವಿರ ಹೊಂಗೆ, 4 ಸಾವಿರ ನೇರಳೆ, 3 ಸಾವಿರ ಇಪ್ಪೆ, 2 ಸಾವಿರ ಅರಳಿ, 3 ಸಾವಿರ ಮಾವಿನ ಸಸಿ ವಿತರಿಸಲಾಗುವುದು' ಎಂದಿದ್ದಾರೆ.

ಹೆಬ್ಬೇವು, ಶ್ರೀಗಂಧ ಬೆಳೆಸಲು ತಾಲ್ಲೂಕಿನಲ್ಲಿ ಉತ್ತಮ ಮಣ್ಣು ಹಾಗೂ ಹವಾಗುಣ ಇದೆ. ಅರಣ್ಯ ಕೃಷಿಗೆ ಮುಂದೆ ಬರುವ ರೈತರಿಗೆ ಇಲಾಖೆಯಿಂದ ನೆರವು ಕೊಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ವಿರೇಶ ಕಲ್ಯಾಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT