ಸ್ಟ್ರೈಕರ್ಸ್‌, ಸ್ಮಾರ್ಟ್‌ ವಿಷನ್‌ ಜಯಭೇರಿ

7
ಜೂನಿಯರ್‌ ಎಚ್‌ಪಿಎಲ್‌ ಕ್ರಿಕೆಟ್‌: ಅಲ್ಪ ಮೊತ್ತಕ್ಕೆ ಸರ್ವಪತನ ಕಂಡ ಬುಲ್ಸ್‌ ಪಡೆ

ಸ್ಟ್ರೈಕರ್ಸ್‌, ಸ್ಮಾರ್ಟ್‌ ವಿಷನ್‌ ಜಯಭೇರಿ

Published:
Updated:
ಸ್ಟ್ರೈಕರ್ಸ್‌, ಸ್ಮಾರ್ಟ್‌ ವಿಷನ್‌ ಜಯಭೇರಿ

ಹುಬ್ಬಳ್ಳಿ: ಬಿಜಾಪುರ ಬುಲ್ಸ್‌ ಸಿಸಿಐ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದ ಗದಗನ ವಾಲ್ಮೀಕಿ ಸ್ಟ್ರೈಕರ್ಸ್‌ ತಂಡ ಜೂನಿಯರ್‌ ಎಚ್‌ಪಿಎಲ್‌ ಕ್ರಿಕೆಟ್‌ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ 45 ರನ್‌ಗಳ ಸುಲಭ ಗೆಲುವು ಸಾಧಿಸಿತು.

ರಾಜನಗರದಲ್ಲಿರುವ ಕೆ.ಎಸ್‌.ಸಿ.ಎ ಕ್ರೀಡಾಂಗಣದಲ್ಲಿ ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌ ಆಯೋಜಿಸಿರುವ ಟೂರ್ನಿಯಲ್ಲಿ ಮೊದಲು ಬ್ಯಾಟ್‌ ಮಾಡಿದ ವಾಲ್ಮೀಕಿ ಸ್ಟ್ರೈಕರ್ಸ್‌ ನಿಗದಿತ 30 ಓವರ್‌ಗಳಲ್ಲಿ 119 ರನ್ ಗಳಿಸಿತು. ಸಾಧಾರಣ ಗುರಿಯ ಮುಂದೆ ಪರದಾಡಿದ ಬುಲ್ಸ್‌ ಬಳಗ 22.5 ಓವರ್‌ಗಳಲ್ಲಿ 74 ರನ್‌ಗೆ ಸರ್ವಪತನ ಕಂಡಿತು. 

ಹಿಂದಿನ ಪಂದ್ಯದಲ್ಲಿ ಬುಲ್ಸ್‌ ಎದುರು ಗೆಲುವು ಪಡೆದಿದ್ದ ಎನ್‌.ಕೆ. ವಾರಿಯರ್ಸ್ ಶುಕ್ರವಾರ ಬೆಳಗಾವಿಯ ಸ್ಮಾರ್ಟ್‌ ವಿಷನ್‌ ವಿರುದ್ಧ ಪರಾಭವಗೊಂಡಿತು. ವಾರಿಯರ್ಸ್‌ ನೀಡಿದ್ದ 160 ರನ್ ಗುರಿಯನ್ನು ಸ್ಮಾರ್ಟ್‌ ವಿಷನ್ ತಂಡ 26.1 ಓವರ್‌ಗಳಲ್ಲಿ ತಲುಪಿತು. ಓಂ ರೂಪ್‌ಚಾಂದನಿ (ಅಜೇಯ 64, 54 ಎಸೆತ, 11 ಬೌಂಡರಿ) ಅರ್ಧಶತಕ ಗೆಲುವಿಗೆ ಕಾರಣವಾಯಿತು.

ಶನಿವಾರ ಧಾರವಾಡದ ಡ್ರಾಪಿನ್‌ ವಾರಿಯರ್ಸ್‌–ಎನ್‌.ಕೆ.ವಾರಿಯರ್ಸ್‌ (ಬೆ. 8ಕ್ಕೆ) ಮತ್ತು ಸ್ಮಾರ್ಟ್‌ ವಿಷನ್‌–ಬಿಜಾಪುರ ಬುಲ್ಸ್‌ (ಮ. 1.15ಕ್ಕೆ) ಪೈಪೋಟಿ ನಡೆಸಲಿವೆ.

ಸಂಕ್ಷಿಪ್ತ ಸ್ಕೋರು: ಎನ್‌.ಕೆ. ವಾರಿಯರ್ಸ್‌ 30 ಓವರ್‌ಗಳಲ್ಲಿ 4ಕ್ಕೆ159 (ರೋಹನ ಯರೇಸೀಮಿ 62, ಧ್ರುವ ನಾಯ್ಕ 44, ಅಬ್ದುಲ್‌ ಕರೀಮ್‌ ದಿವಾನ್‌ ಅಲಿ ಔಟಾಗದೆ 21; ಅನೀಶ ಕಬಾಡಿ 24ಕ್ಕೆ2, ಸಾಯಿ ಕರೇಕರ 32ಕ್ಕೆ1), ಬಿಎಸ್‌ಸಿ ಸ್ಮಾರ್ಟ್‌ ವಿಷನ್‌, ಬೆಳಗಾವಿ 26.1 ಓವರ್‌ಗಳಲ್ಲಿ 6ಕ್ಕೆ 163 (ಓಂ ರೂಪ್‌ಚಾಂದನಿ ಅಜೇಯ 64, ಸಿದ್ದೇಶ ಅಸಲಕರ 28, ಕೇದಾರನಾಥ ಉಸಲಕರ 25; ಅಬ್ದುಲ್‌ ಕರೀಮ್‌ ದಿವಾನ್‌ ಅಲಿ 18ಕ್ಕೆ4, ರೋಹನ ಯರೇಸೀಮಿ 23ಕ್ಕೆ1, ಮಾಧವ ಧಾರವಾಡಕರ 25ಕ್ಕೆ1). ಫಲಿತಾಂಶ: ಸ್ಮಾರ್ಟ್‌ ವಿಷನ್‌ ತಂಡಕ್ಕೆ 4 ವಿಕೆಟ್‌ ಗೆಲುವು.

ವಾಲ್ಮೀಕಿ ಸ್ಟ್ರೈಕರ್ಸ್‌ 30 ಓವರ್‌ಗಳಲ್ಲಿ 7ಕ್ಕೆ119 (ಶತಕ ಗುಂಜಾಳ 42, ಶುಭಮ್‌ ಉಮಜಿ 20, ತೇಜಸ್‌ ಮುರ್ಡೇಶ್ವರ 20; ಬಾಬು ಗದ್ದಮ್‌ 21ಕ್ಕೆ3, ಆರ್ಯನ್ ಶರ್ಮ 8ಕ್ಕೆ1). ಬಿಜಾಪುರ ಬುಲ್ಸ್‌ ಸಿಸಿಐ ತಂಡ 22.5 ಓವರ್‌ಗಳಲ್ಲಿ 74 (ಆರ್‌.ಎಸ್‌. ನವೀನ 17, ತನೀಷ್ಕ ನಾಯ್ಕ 16; ಮೊಹಮ್ಮದ್‌ ರೆಹಾನ್‌ ಕಿತ್ತೂರ 7ಕ್ಕೆ3, ದೀಪಕ ನೀರಲಗಿ 9ಕ್ಕೆ2). ಫಲಿಆಂಶ: ವಾಲ್ಮೀಕಿ ಸ್ಟ್ರೈಕರ್ಸ್ ತಂಡಕ್ಕೆ 45 ರನ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry