ಶ್ರೀರಾಮ ಸೇನೆಗೂ ಪರಶುರಾಮ ವಾಘ್ಮೋರೆಗೂ ಸಂಬಂಧವಿಲ್ಲ: ಮುತಾಲಿಕ್‌

7

ಶ್ರೀರಾಮ ಸೇನೆಗೂ ಪರಶುರಾಮ ವಾಘ್ಮೋರೆಗೂ ಸಂಬಂಧವಿಲ್ಲ: ಮುತಾಲಿಕ್‌

Published:
Updated:
ಶ್ರೀರಾಮ ಸೇನೆಗೂ ಪರಶುರಾಮ ವಾಘ್ಮೋರೆಗು ಸಂಬಂಧವಿಲ್ಲ: ಪ್ರಮೋದ್‌ ಮುತಾಲಿಕ್‌

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಸಂಬಂಧ ಎಸ್‌ಐಟಿ ಬಂಧಿಸಿರುವ ಪರಶುರಾಮ ವಾಘ್ಮೋರೆಗೂ ಮತ್ತು ಶ್ರೀರಾಮ ಸೇನೆಗೂ ಸಂಬಂಧವಿಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ಹೇಳಿದ್ದಾರೆ.

‘ಶ್ರೀರಾಮ ಸೇನೆಗೂ ಪರಶುರಾಮಗು ಸಂಬಂಧವಿಲ್ಲ. ಅವರು ಎಸ್‌ಐಟಿ ಮುಂದೆ ಏನು ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ನನ್ನ ಜತೆ ಹಲವು ಜನ ಫೋಟೊ ತೆಗೆಸಿಕೊಂಡಿದ್ದಾರೆ. ಬರಿ ನನ್ನ ಜತೆ ಫೋಟೊ ತೆಗೆಸಿಕೊಂಡ ಮಾತ್ರಕ್ಕೆ ಅವರು ನಮ್ಮ ಕಾರ್ಯಕರ್ತ ಎಂದು ಹೇಳಲಾಗದು’ ಎಂದು ಪ್ರಮೋದ್‌ ಮುತಾಲಿಕ್‌ ‍ಹೇಳಿದ್ದಾರೆ ಎಂದು ಶನಿವಾರ ಎಎನ್‌ಐ ವರದಿ ಮಾಡಿದೆ.

ವಿಜಯಪುರ ಜಿಲ್ಲೆಯ ಸಿಂದಗಿಯ ಪರಶುರಾಮ ವಾಘ್ಮೋರೆಯನ್ನು ಎಸ್‌ಐಟಿ ಜೂನ್ 11ರಂದು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ.

‘ಹಿಂದೂ ಧರ್ಮವನ್ನು ನೀನು ತುಂಬ ಪ್ರೀತಿಸುತ್ತೀಯಾ ಎಂದು ನನಗೆ ಗೊತ್ತು. ಧರ್ಮದ ಉಳಿವಿಗಾಗಿ ಈಗ ನಿನ್ನಿಂದ ಮಹತ್ವದ ಕಾರ್ಯವೊಂದು ಆಗಬೇಕಿದೆ. ಆ ಕೆಲಸ ಮಾಡಲು ಧೈರ್ಯವಿದ್ದರೆ ಎಲ್ಲ ರೀತಿಯಲ್ಲೂ ನಿನ್ನನ್ನು ಸಜ್ಜುಗೊಳಿಸುತ್ತೇನೆ....’ 2017ರ ಆಗಸ್ಟ್‌ನಲ್ಲಿ ತನ್ನನ್ನು ಭೇಟಿಯಾದ ವ್ಯಕ್ತಿಯೊಬ್ಬ ಈ ಮೇಲಿನ ರೀತಿ ಹೇಳಿದ್ದಾಗಿ ಎಸ್‌ಐಟಿ ವಿಚಾರಣೆ ವೇಳೆ ಪರಶುರಾಮ ವಾಘ್ಮೋರೆ ಬಾಯ್ಬಿಟ್ಟಿದ್ದಾನೆ.

* ಇದನ್ನೂ ಓದಿ...
* ಗೌರಿ ಮಾತು ಕೇಳಿದಾಗ ರಕ್ತ ಕುದಿಯಿತು: ವಾಘ್ಮೋರೆ ತಪ್ಪೊಪ್ಪಿಗೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry