ರಜೆ: ಜೋಗದತ್ತ ಪ್ರವಾಸಿಗರ ದಂಡು

7

ರಜೆ: ಜೋಗದತ್ತ ಪ್ರವಾಸಿಗರ ದಂಡು

Published:
Updated:

ಕಾರ್ಗಲ್: ಶರಾವತಿ ಕಣಿವೆಯಾದ್ಯಂತ ಸುರಿದ ಮುಂಗಾರು ಮಳೆಯಿಂದ ವಿಶ್ವ ಪ್ರಸಿದ್ಧ ಜೋಗ ಜಲಪಾತ ತನ್ನ ಪ್ರಕೃತಿ ಸಹಜವಾದ ಸೌಂದರ್ಯದೊಂದಿಗೆ ಧುಮ್ಮಿಕ್ಕುತ್ತಿದೆ.

ಜಲಪಾತದ ಸೌಂದರ್ಯ ವೀಕ್ಷಿಸಲು ಪ್ರವಾಸಿಗರ ದಂಡು ಜೋಗಕ್ಕೆ ಲಗ್ಗೆ ಇಡುತ್ತಿದೆ. ಈದ್‌ ಉಲ್‌ ಫಿತ್ರ್‌, ಭಾನುವಾರದ ರಜೆ ಇರುವ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.

ಸ್ಥಳೀಯ ಛಾಯಾಗ್ರಾಹಕರು, ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಟ್ಯಾಕ್ಸಿ ಚಾಲಕರು ಮತ್ತು ಪ್ರವಾಸಿ ಗೈಡ್‌ಗಳು ಶರಾವತಿ ಕಣಿವೆಯ ವಿವಿಧ ಪ್ರದೇಶಗಳನ್ನು ಪ್ರವಾಸಿಗರಿಗೆ ತೋರಿಸಲು ಉತ್ಸುಕರಾಗಿದ್ದುದು ಶುಕ್ರವಾರ ಕಂಡು ಬಂತು. ಜೋಗ ಅಭಿವೃದ್ಧಿ ಪ್ರಾಧಿಕಾರವು ಎಲ್ಲೆಡೆ ಪ್ರವಾಸಿಗರಿಗೆ ಅಪಾಯಕಾರಿಯಾದ ಪ್ರದೇಶಗಳ ಬಗ್ಗೆ ಮಾಹಿತಿ ಫಲಕಗಳನ್ನು ಅಳವಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry