ಪುರೂರವ

7

ಪುರೂರವ

Published:
Updated:
ಪುರೂರವ

ಪುರೂರವ ಯಾರು?

ಪುರೂರವನು ಪಂಜಾಬಿನ ಝೇಲಂ ಮತ್ತು ಚೆನಾಬ್‌ ನಡುವಣ (ಈಗ ಪಾಕಿಸ್ತಾನದಲ್ಲಿ ಇದೆ) ಪ್ರದೇಶದ ರಾಜನಾಗಿದ್ದ.

ಆತ ಆಡಳಿತ ನಡೆಸಿದ್ದು ಯಾವ ಅವಧಿಯಲ್ಲಿ?

ಕ್ರಿಸ್ತ ಪೂರ್ವ 327ರಲ್ಲಿ ಅಲೆಕ್ಸಾಂಡರನು ಭಾರತದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪುರೂರವ ಆಡಳಿತ ನಡೆಸುತ್ತಿದ್ದ.

ಪುರೂರವನಿಗೆ ಯಾರ ಬಗ್ಗೆ ತಿರಸ್ಕಾರ ಇತ್ತು?

ಅಲೆಕ್ಸಾಂಡರನ ವಿರುದ್ಧ ಹೋರಾಟವನ್ನೇ ನಡೆಸದೆ ಶರಣಾದ ತಕ್ಷಶಿಲೆಯ ರಾಜ ಅಂಭಿಯಂತಹ ವ್ಯಕ್ತಿಗಳ ಬಗ್ಗೆ ಪುರೂರವ ತಿರಸ್ಕಾರ ಮನೋಭಾವ ಹೊಂದಿದ್ದ.

ಪುರೂರವ ಹಾಗೂ ಅಲೆಕ್ಸಾಂಡರನ ನಡುವೆ ಯುದ್ಧ ನಡೆದಿದ್ದು ಎಲ್ಲಿ?

ಝೇಲಂ ಸಮೀಪ ಯುದ್ಧ ನಡೆಯಿತು.

ಅಲೆಕ್ಸಾಂಡರನು ಪುರೂರವನ ಸ್ನೇಹ ಬಯಸಿದ್ದು ಏಕೆ?

ಪುರೂರವನ ಶೌರ್ಯ ಅಲೆಕ್ಸಾಂಡರನ ಮೇಲೆ ಗಾಢ ಪ್ರಭಾವ ಬೀರಿತು. ಯುದ್ಧಕೈದಿಯಾಗಿ ಬಂಧಿಸಿದಾಗ ಕೂಡ ಪುರೂರವ ಶಾಂತಚಿತ್ತನಾಗಿ ಇದ್ದಿದ್ದು ಅಲೆಕ್ಸಾಂಡರನ ಮೆಚ್ಚುಗೆಗೆ ಕಾರಣವಾಯಿತು. ‘ನಿನ್ನನ್ನು ಯಾವ ರೀತಿ ಕಾಣಬೇಕು’ ಎಂದು ಅಲೆಕ್ಸಾಂಡರ್ ಪ್ರಶ್ನಿಸಿದಾಗ, ‘ನನ್ನನ್ನು ರಾಜನಂತೆಯೇ ಕಾಣಬೇಕು’ ಎಂದು ಪುರೂರವ ಉತ್ತರಿಸಿದ. ಅಲೆಕ್ಸಾಂಡರನು ಪುರೂರವನಿಗೆ ಅವನ ರಾಜ್ಯವನ್ನು ಮರಳಿಸುವ ಮೂಲಕ ಅವನನ್ನು ರಾಜನಂತೆಯೇ ಕಾಣುತ್ತಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry